ಗುರುವಾರ , ಜೂಲೈ 9, 2020
29 °C

ಬೆಳಗಾವಿ: ಸಾಂಬ್ರಾದಿಂದ ಮುಂಬೈ, ಪುಣೆ, ಮೈಸೂರಿಗೆ ವಿಮಾನಗಳ ಹಾರಾಟ ರದ್ದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ಪ್ರಯಾಣಿಕರ ಕೊರತೆ ಹಾಗೂ ತಾಂತ್ರಿಕ ಕಾರಣಗಳಿಂದಾಗಿ ಇಲ್ಲಿನ ಸಾಂಬ್ರಾದಿಂದ ಮುಂಬೈ, ಪುಣೆ ಹಾಗೂ ಮೈಸೂರಿಗೆ ವಿಮಾನಗಳ ಹಾರಾಟ ರದ್ದು ಮಾಡಲಾಗಿದೆ.

ಸೋಮವಾರ ಬೆಂಗಳೂರು, ಅಹಮದಾಬಾದ್ (ಸ್ಟಾರ್ ಏರ್) ಹಾಗೂ ಹೈದರಾಬಾದ್- ಬೆಳಗಾವಿ ನಡುವೆ ವಿಮಾನ (ಸ್ಪೈಸ್ ಜೆಟ್) ಸಂಚಾರ ನಡೆಸಲಿದೆ. ಬೆಂಗಳೂರಿನಿಂದ ಬೆಳಿಗ್ಗೆ ಬಂದ ವಿಮಾನ ಅಹಮದಾಬಾದ್‌ಗೆ ತೆರಳಿತು. ಲಾಕ್ಡೌನ್ ಪರಿಣಾಮ ಎರಡು ತಿಂಗಳ ಬಳಿಕ ವಿಮಾನಗಳ ಹಾರಾಟ ಆರಂಭವಾಗಿದೆ.

'ಪ್ರಯಾಣಿಕರು ಅಂತರ ಕಾಯ್ದುಕೊಳ್ಳಲು ಅಗತ್ಯವಾದ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಹಂತ ಹಂತವಾಗಿ ಇಲ್ಲಿಂದ ವಿವಿಧ ನಗರಗಳಿಗೆ ವಿಮಾನಯಾನ ಆರಂಭವಾಗಲಿದೆ' ಎಂದು ನಿಲ್ದಾಣದ ನಿರ್ದೇಶಕ ರಾಜೇಶ್ ಕುಮಾರ್ ಮೌರ್ಯ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು