ಸೋಮವಾರ, ಆಗಸ್ಟ್ 19, 2019
28 °C

ಪರಿಹಾರಕ್ಕೆ ಸರ್ಕಾರಿ ನೌಕರರ ದಿನದ ವೇತನ

Published:
Updated:

ಬೆಂಗಳೂರು: ‘ಪ್ರವಾಹ ಸಂತ್ರಸ್ತರಿಗೆ ನೆರವಾಗಲು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಸರ್ಕಾರಿ ನೌಕರರ ಒಂದು ದಿನದ ವೇತನ ನೀಡಲಾಗುವುದು’ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ನೂತನ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಶುಕ್ರವಾರ ತಿಳಿಸಿದರು. 

ಸುದ್ದಿಗೋಷ್ಠಿಯಲ್ಲಿ ಅವರು, ‘ರಾಜ್ಯದಲ್ಲಿ 5.40 ಲಕ್ಷಕ್ಕೂ ಅಧಿಕ ಸರ್ಕಾರಿ ನೌಕರರಿದ್ದು, ದಿನದ ವೇತನ ಕ್ರೋಡೀಕರಿಸಿದರೆ ಸುಮಾರು ₹150 ಕೋಟಿ ಆಗಲಿದೆ‘ ಎಂದು ತಿಳಿಸಿದರು.

ನೌಕರರಿಗೆ ಗೃಹಬಳಕೆ ವಸ್ತುಗಳು ರಿಯಾಯಿತಿ ದರದಲ್ಲಿ ಒದಗಿಸಲು ಮಿಲಿಟರಿ ಕ್ಯಾಂಟೀನ್ ಮಾದರಿಯಲ್ಲಿ ಸರ್ಕಾರಿ ನೌಕರರ ಕ್ಯಾಂಟೀನ್ ಸ್ಥಾಪಿಸಲಾಗುವುದು.

‘ನೌಕರರ ವೃತ್ತಿಕೌಶಲ ಹೆಚ್ಚಿಸಲು ಜಿಲ್ಲೆ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಕಾರ್ಯಾಗಾರ ಏರ್ಪಡಿಸಲಾಗುವುದು. ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 2.40 ಲಕ್ಷ ಹುದ್ದೆಗಳ ಶೀಘ್ರ ಭರ್ತಿ ಬಗ್ಗೆ ಸಿ.ಎಂ ಜೊತೆಗೆ ಚರ್ಚಿಸಲಿದ್ದೇವೆ‘ ಎಂದರು.

Post Comments (+)