ಎಸ್‌.ಎಂ ಕೃಷ್ಣ ಅಳಿಯನಿಂದ ಅಕ್ರಮ ಹೂಡಿಕೆ: ಎಸ್‌.ಆರ್. ಹಿರೇಮಠ ಆರೋಪ

7

ಎಸ್‌.ಎಂ ಕೃಷ್ಣ ಅಳಿಯನಿಂದ ಅಕ್ರಮ ಹೂಡಿಕೆ: ಎಸ್‌.ಆರ್. ಹಿರೇಮಠ ಆರೋಪ

Published:
Updated:

ಹುಬ್ಬಳ್ಳಿ: ‘ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಅವರ ಎರಡನೇ ಅಳಿಯ ಉಮೇಶ್ ಮೋಹನ್ ಹಿಂಗೋರಾಣಿ ಅವರು, ಇಂಗ್ಲೆಂಡ್‌ನಲ್ಲಿ ಅಕ್ರಮ ಹೂಡಿಕೆ ಮಾಡಿದ್ದಾರೆ. ದೇಶ– ವಿದೇಶಗಳ ಗಣ್ಯರ ಅಕ್ರಮ ಸಂಪತ್ತಿನ ದಾಖಲೆಗಳನ್ನು ಬಹಿರಂಗಗೊಳಿಸಿದ ‘ಪನಾಮಾ ಪೇಪರ್ಸ್‌’ನಲ್ಲಿ ಅವರ ಹೆಸರು ಸಹ ಇರುವುದು ಬೆಳಕಿಗೆ ಬಂದಿದೆ’ ಎಂದು ಸಮಾಜ ಪರಿವರ್ತನಾ ಸಮುದಾಯದ ಸಂಸ್ಥಾಪಕ ಅಧ್ಯಕ್ಷ ಎಸ್.ಆರ್. ಹಿರೇಮಠ ಶುಕ್ರವಾರ ಇಲ್ಲಿ ಆರೋಪ ಮಾಡಿದರು.

‘ಉಮೇಶ್ ಅವರು ಯುಬಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದರು. ಅಂತಹ ವ್ಯಕ್ತಿಗೆ ಎಸ್‌ಡಿಯು ವೆಂಚರ್ಸ್ ಹೆಸರಿನಲ್ಲಿ ವಿದೇಶದಲ್ಲಿ ಹೂಡಿಕೆ ಮಾಡುವಷ್ಟು ಹಣ ಎಲ್ಲಿಂದ ಬಂತು ಎಂಬುದು ಪ್ರಶ್ನೆಯಾಗಿದೆ. ಅಲ್ಲದೆ, ಅವರು ಹಾಗೂ ಅವರ ಪತ್ನಿ ಶಾಂಭವಿ ಎಂಟು ಕಂಪನಿಗಳನ್ನು ಹೊಂದಿದ್ದು, ಎಲ್ಲ ಕಂಪನಿಗಳು ಬೆಂಗಳೂರಿನ ವಿಳಾಸ ಹೊಂದಿವೆ. ಈ ಕುರಿತು ಸ್ವತಂತ್ರ ಸಂಸ್ಥೆಯಿಂದ ತನಿಖೆ ನಡೆಸುವಂತೆ ಪ್ರಧಾನಿ, ಹಣಕಾಸು ಸಚಿವರಿಗೆ ಪತ್ರ ಬರೆಯಲಾಗುವುದು’ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಉಮೇಶ್ ಅವರು ವಿದೇಶದಲ್ಲಿ ಕಂಪನಿ ಆರಂಭಿಸಿದ ಸಮಯದಲ್ಲಿ ಕೃಷ್ಣ ವಿದೇಶಾಂಗ ಸಚಿವರಾಗಿದ್ದರು. ಆದ್ದರಿಂದ ಇದೊಂದು ಗಂಭೀರ ಪ್ರಕರಣವಾಗಿದ್ದು, ತನಿಖೆಯಿಂದ ಮಾತ್ರ ಸತ್ಯ ಹೊರಗೆ ಬರಲು ಸಾಧ್ಯ’ ಎಂದು ಅವರು ಹೇಳಿದರು.

‘ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಸೇರಿದಂತೆ ದೇಶ– ವಿದೇಶಗಳ ಗಣ್ಯರ ಅಕ್ರಮ ಹೂಡಿಕೆ ವಿಷಯಗಳು ಈ ಹಿಂದೆಯೇ ಬಹಿರಂಗಗೊಂಡಿದ್ದವು. ಆದರೆ ಉಮೇಶ್ ಅವರ ವಿಷಯ ಮಾತ್ರ ಗೊತ್ತಾಗದಿದ್ದುದು ಆಶ್ಚರ್ಯ ತಂದಿದೆ’ ಎಂದರು.

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !