ಭಾನುವಾರ, ಡಿಸೆಂಬರ್ 8, 2019
20 °C

₹12 ಲಕ್ಷ ವಂಚನೆ; ದೂರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಳ್ಳಾರಿ: ಹೀರಾ ಸಮೂಹ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕಿ ನೌಹೇರಾ ಶೇಖ್ ವಿರುದ್ಧ ಇಲ್ಲಿನ ಕೌಲ್‌ಬಜಾರ್ ಠಾಣೆಯಲ್ಲಿ ಅಬ್ದುಲ್ ತವಾಬ್ ಎಂಬವರು ₹12 ಲಕ್ಷ ವಂಚನೆ ಮಾಡಿದ್ದಾರೆ ಎಂದು ದೂರು ದಾಖಲಿದ್ದಾರೆ.

ಅಧಿಕ ಲಾಭಾಂಶದ ಆಸೆಯಿಂದ 2016ರಲ್ಲಿ ₹10 ಲಕ್ಷ, 2018ರಲ್ಲಿ ₹2ಲಕ್ಷ ಸಂಸ್ಥೆಯಲ್ಲಿ ಹೂಡಿಕೆ ಮಾಡಿರುವ ಅವರಿಗೆ ₹5.50 ಲಕ್ಷ ವಾಪಸ್ಸು ನೀಡಲಾಗಿದೆ. ₹1ಲಕ್ಷಕ್ಕೆ ಶೇ.36ರಷ್ಟು ಬಡ್ಡಿ ಸಿಗುತ್ತದೆ ಎಂದು ಹಣ ಹೂಡಿಕೆ ಮಾಡಿ ವಂಚನೆಗೆ ಒಳಗಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಹೊಸಪೇಟೆಯಲ್ಲಿನ ದೂರು ದಾಖಲಾಗಿರುವುದು ತಿಳಿಯುತ್ತಿದ್ದಂತೆ  ಅಬ್ದುಲ್‌ ತವಾಬ್‌ ಇಲ್ಲಿನ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು