ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮುದಾಯ ನಿಂದನೆ: ಯುವತಿ ವಿರುದ್ಧ ದೂರು

Last Updated 29 ಮಾರ್ಚ್ 2018, 6:35 IST
ಅಕ್ಷರ ಗಾತ್ರ

ಶಿವಮೊಗ್ಗ: ಮಸೀದಿ ಮುಂದೆ ನಿಂತು ತಮ್ಮದೇ ಸಮುದಾಯದ ಯುವತಿಯೊಬ್ಬಳು ಕೆಟ್ಟದಾಗಿ ಮುಸ್ಲಿಂ ಸಮುದಾಯವನ್ನು ನಿಂದಿಸಿದ್ದಾಳೆ ಎಂದು ಆರೋಪಿಸಿ ಸವಾಯಿಪಾಳ್ಯ ಮಸೀದಿಯ ಗುರುಗಳು ಹಾಗೂ ಸಮಾಜದ ನೂರಾರು ಮುಖಂಡರು ದೊಡ್ಡಪೇಟೆ ಠಾಣೆ ಮುಂದೆ ಬುಧವಾರ ಜಮಾಯಿಸಿ, ಆಕ್ರೋಶ ವ್ಯಕ್ತಪಡಿಸಿದರು.

ಆ ಯುವತಿ ಹಿಂದೆ ಕಾಣದ ಶಕ್ತಿಯ ಕೈವಾಡವಿದೆ. ಮುಸ್ಲಿಂ ಸಮುದಾಯದ ವಿರುದ್ಧವೇ ಅಪಪ್ರಚಾರ ಮಾಡುತ್ತಿದ್ದಾರೆ. ಪೊಲೀಸರ ಮುಂದೆಯೇ ನಿಂದನೆ ಮಾಡಿದ್ದಾರೆ. ಮಸೀದಿಯಲ್ಲಿ ಅಜಾನ್ ಕೂಗಬಾರದು ಎಂದು ಹೇಳಿದ್ದಾರೆ. ಚುನಾವಣೆ ಸಮಯದಲ್ಲಿ ಈ ಘಟನೆ ಶಾಂತಿ ಕದಡಲು ಕಾರಣವಾಗಿದೆ. ಹಾಗಾಗಿ ಯುವತಿ ಹಾಗೂ ಅದರ ಹಿಂದೆ ಇರುವವರ ಬಗ್ಗೆ ತನಿಖೆ ನಡೆಸಿ, ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ದೊಡ್ಡಪೇಟೆ ಪೊಲೀಸರು ಯುವತಿ ವಿರುದ್ಧ ದೂರು ದಾಖಲಿಸಿಕೊಂಡರು.

ಘಟನೆ ಹಿನ್ನೆಲೆ: ಇಲ್ಲಿನ ಸವಾಯಿಪಾಳ್ಯ ಕ್ರಾಸ್‌ನಲ್ಲಿ ಹಿಂದೂ ಹುಡುಗ ಹಾಗೂ ಹುಡುಗಿಯ ಜತೆ ಮುಸ್ಲಿಂ ಯುವತಿ ಬೈಕ್‌ನಲ್ಲಿ ಹೋಗುತ್ತಿದ್ದಾಗ ತಡೆದ ಕೆಲ ಹುಡುಗರು ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಿದ್ದರು.

‘ನೀನು ಮುಸ್ಲಿಂ ಯುವತಿಯಾಗಿ ಹಿಂದೂ ಹುಡುಗನ ಜತೆಗೆ ಹೋಗುವುದಕ್ಕೆ ನಾಚಿಕೆ ಆಗುವುದಿಲ್ಲವೇ? ನೀನು, ನಿಮ್ಮ ಕುಟುಂಬದವರು ಊರು ಬಿಟ್ಟು ಹೋಗಬೇಕು. ಇಲ್ಲವಾದರೆ ಏನು ಮಾಡಬೇಕು ಎಂದು ನಮಗೆ ತಿಳಿದಿದೆ' ಎಂದು ಬೆದರಿಕೆ ಹಾಕಿದ್ದರು.

ಈ ಸಂಬಂಧ ಯುವತಿ ದೂರು ದಾಖಲಿಸಿದ್ದರು. ಈಗ ಮುಸ್ಲಿಂ ಸಮುದಾಯದ ಮುಖಂಡರು ಈ ಯುವತಿಯ ವಿರುದ್ಧ ದೂರು ದಾಖಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT