ರೈಲು ಏರಿ ಗ್ರಾಮ ವಾಸ್ತವ್ಯಕ್ಕೆ ಹೊರಟ ಮುಖ್ಯಮಂತ್ರಿ 

ಬುಧವಾರ, ಜೂಲೈ 17, 2019
29 °C

ರೈಲು ಏರಿ ಗ್ರಾಮ ವಾಸ್ತವ್ಯಕ್ಕೆ ಹೊರಟ ಮುಖ್ಯಮಂತ್ರಿ 

Published:
Updated:

ಬೆಂಗಳೂರು: ಗ್ರಾಮ ವಾಸ್ತವ್ಯ ನಿಗದಿಯಾಗಿರುವ ಯಾದಗಿರಿ ಜಿಲ್ಲೆಯ ಗುರುಮಿಠಕಲ್‌ಗೆ ತೆರಳಲು ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ ಅವರು ಗುರುವಾರ ಸಂಜೆ ಬೆಂಗಳೂರಿನಲ್ಲಿ ರೈಲು ಏರಿದರು.  

ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ರಾತ್ರಿ 7.30ಕ್ಕೆ ಕರ್ನಾಟಕ ಎಕ್ಸ್‌ಪ್ರೆಸ್‌ ರೈಲು ಹತ್ತಿದ ಸಿಎಂ ಎಚ್‌ಡಿಕೆ,  ಶುಕ್ರವಾರ 3.48ರ ನಸುಕಿನಲ್ಲಿ ಯಾದಗಿರಿ ರೈಲ್ವೆ ನಿಲ್ದಾಣ ತಲುಪಲಿದ್ದಾರೆ. ನಂತರ ರಸ್ತೆ ಮೂಲಕ ಗ್ರಾಮ ವಾಸ್ತವ್ಯ ನಿಗದಿಯಾಗಿರುವ ಚಂಡರಕಿ ಕಡೆಗೆ ಅವರು ಪ್ರಯಾಣ ಬೆಳಸಲಿದ್ದಾರೆ. ಬೆಳಗ್ಗೆ 7.30ಕ್ಕೆ ಚಂಡರಕಿ ತಲುಪಲಿದ್ದು, ಬೆಳಗ್ಗೆ 10 ಗಂಟೆಗೆ ಅಲ್ಲಿನ ಸರ್ಕಾರಿ ಶಾಲೆಯಲ್ಲಿ ಜನತಾ ದರ್ಶನ ಆರಂಭವಾಗಲಿದೆ.  

ಬರಹ ಇಷ್ಟವಾಯಿತೆ?

 • 17

  Happy
 • 1

  Amused
 • 2

  Sad
 • 1

  Frustrated
 • 6

  Angry

Comments:

0 comments

Write the first review for this !