ಜಿ.ಟಿ.ದೇವೇಗೌಡ್ರೂ ರಾಜೀನಾಮೆ ಕೊಡುತ್ತಾರೆ ನೋಡ್ತಿರಿ: ವಿಶ್ವನಾಥ್‌

ಬುಧವಾರ, ಜೂಲೈ 24, 2019
27 °C

ಜಿ.ಟಿ.ದೇವೇಗೌಡ್ರೂ ರಾಜೀನಾಮೆ ಕೊಡುತ್ತಾರೆ ನೋಡ್ತಿರಿ: ವಿಶ್ವನಾಥ್‌

Published:
Updated:

ಬೆಂಗಳೂರು: ‘ನನಗೆ ರಾಜಕೀಯ ಪುನರ್ಜನ್ಮ ‌ನೀಡಿದ್ದು ದೇವೇಗೌಡರಲ್ಲ. ನನ್ನ ಕ್ಷೇತ್ರದ ಜನ. ನಾನು ಹೆಸರಿಗೆ ಮಾತ್ರ ಜೆಡಿಎಸ್ ಅಧ್ಯಕ್ಷ ಆಗಿದ್ದೆ’ ಎಂದು ವಿಶ್ವನಾಥ್‌ ವಾಗ್ದಾಳಿ ನಡೆಸಿದರು.

ಆಸರೆ ನೀಡಿದ ಜೆಡಿಎಸ್‌ಗೆ ವಿಶ್ವನಾಥ್‌ ಕೈಕೊಟ್ಟಿದ್ದಾರೆ ಎನ್ನುವ ಮಾತುಕೇಳಿ ಬಂದ ನಂತರ ಆ ಬಗ್ಗೆ ಪ್ರತಿಕ್ರಿಯಿಸಿರುವ ವಿಶ್ವನಾಥ್‌, ‘ಕುಮಾರಸ್ವಾಮಿ ನಮ್ಮ ಮಾತಿಗೆ ಮನ್ನಣೆ ಕೊಡುವ ಕೆಲಸ ಮಾಡಲಿಲ್ಲ. ಹೆಸರಿಗೆ ಮಾತ್ರ ಜೆಡಿಎಸ್ ಅಧ್ಯಕ್ಷನಾಗಿದ್ದೆ. ನನ್ನ ಅಳಿಯನ ವರ್ಗಾವಣೆ ಮಾಡಿಸಲು ನನಗೆ ಆಗಲಿಲ್ಲ. ಸಾರಾ ಮಹೇಶ್ ನನ್ನ ಅಳಿಯನಿಗೆ ಕುಡುಕನ ಪಟ್ಟ ಕಟ್ಟಿದರು’ ಎಂದು ಬೇಸರ ವ್ಯಕ್ತಪಡಿಸಿದರು.

‘ರಾಜ್ಯದಲ್ಲಿ ಜೆಡಿಎಸ್ ವಾಷ್ಔಟ್ ಆಗಿದೆ. ಜೆಡಿಎಸ್ ನಾಯಕರ ನಡವಳಿಕೆ ಬಹುತೇಕ ಶಾಸಕರ ಅಸಮಾಧಾನಕ್ಕೆ ಕಾರಣವಾಗಿದೆ. ಸಾರಾ ಮಹೇಶ್ ನಡವಳಿಕೆ ಸರಿಯಿಲ್ಲ. ಅದರಿಂದ ಜಿ.ಟಿ.ದೇವೇಗೌಡರೂ ಬೇಸತ್ತು ಹೋಗಿದ್ದಾರೆ. ನೋಡ್ತಿರಿ ಅವರೂ ರಾಜೀನಾಮೆ ಕೊಡುತ್ತಾರೆ’ ಎಂದು ಮತ್ತೊಂದು ಬಾಂಬ್‌ ಸಿಡಿಸಿದರು. 

‘ದುರಹಂಕಾರಿ ಸಿದ್ದರಾಮಯ್ಯ ಎಲ್ಲದ್ದಕ್ಕೂ ನಾನೇ ಅನ್ನೋ ಮನಸ್ಥಿತಿ ಬೆಳೆಸಿಕೊಂಡಿದ್ದಾರೆ’ ಎಂದು ಶಾಸಕ ಬಿ.ಸಿ.ಪಾಟೀಲ್ ಹೇಳಿದರು.

‘ಇನ್ನೂ 10 ಶಾಸಕರು ರಾಜೀನಾಮೆ ಕೊಡುತ್ತಾರೆ. ಸರ್ಕಾರ ಪತನ ಆಗೋದು ಖಚಿತ. ನನಗೆ ಸಚಿವ ಸ್ಥಾನ ಬೇಡ. ನಮ್ಮ ಕ್ಷೇತ್ರದ ಅಭಿವೃದ್ಧಿಗೆ ಸಹಕಾರ ಕೊಡುವ ಪಕ್ಷಕ್ಕೆ ನಮ್ಮ ಬೆಂಬಲ. ಬಿಜೆಪಿ ಜತೆ ಕೈಜೋಡಿಸಲು ಸಿದ್ದ. ನಮಗೆ ಕ್ಷೇತ್ರದ ಅಭಿವೃದ್ಧಿ ಮುಖ್ಯ. ಕ್ಷೇತ್ರದ ಸಮಸ್ಯೆ ಕುರಿತು ಚರ್ಚಿಸಲು ಸಚಿವ ರೇವಣ್ಣ ನಿರ್ಲಕ್ಷ್ಯ ತೋರುತ್ತಾರೆ. ನಮ್ಮ ರಾಜೀನಾಮೆ ತೀರ್ಮಾನ ಅಚಲ’ ಎಂದು ಶಾಸಕ ಮುನಿರತ್ನ ಸ್ಪಷ್ಟಪಡಿಸಿದರು.

ಸಚಿವ ಡಿ.ಕೆ. ಶಿವಕುಮಾರ್ ಅವರು ಇವತ್ತು ಸುಮಾರು 12 ಗಂಟೆಗೆ ಮಾಜಿ ಪ್ರಧಾನಿ ದೇವೇಗೌಡರನ್ನು ಪದ್ಮನಾಭನಗರ ನಿವಾಸದಲ್ಲಿ ಭೇಟಿ ಮಾಡಲಿದ್ದಾರೆ.

ಬರಹ ಇಷ್ಟವಾಯಿತೆ?

 • 19

  Happy
 • 2

  Amused
 • 4

  Sad
 • 4

  Frustrated
 • 5

  Angry

Comments:

0 comments

Write the first review for this !