ಸರ್ಕಾರದ ಸಾಧನೆ ಬಗ್ಗೆ ನಿಮಗೆ ಕಾಳಜಿ ಇಲ್ಲ: ಮಾಧ್ಯಮಗಳ ವಿರುದ್ಧ ಎಚ್‌ಡಿಡಿ ಟೀಕೆ

7

ಸರ್ಕಾರದ ಸಾಧನೆ ಬಗ್ಗೆ ನಿಮಗೆ ಕಾಳಜಿ ಇಲ್ಲ: ಮಾಧ್ಯಮಗಳ ವಿರುದ್ಧ ಎಚ್‌ಡಿಡಿ ಟೀಕೆ

Published:
Updated:

ಶಿವಮೊಗ್ಗ: ‘ಕುಮಾರಸ್ವಾಮಿ ಅವರು ಕಳೆದ ಮೂರು ತಿಂಗಳಲ್ಲಿ ಬಡವರ ಪರವಾಗಿ ಸಾಲ ಮನ್ನಾ ಮಾಡಿದ್ದಾರೆ ಅದರ ಬಗ್ಗೆ ಮಾಧ್ಯಮದವರಿಗೆ ಕಾಳಜಿ ಇಲ್ಲ’ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಕಿಡಿಕಾರಿದರು.

ಮಲೆನಾಡು ಕ್ರೆಡಿಟ್ ಕೋ ಆಫ್ ಸೊಸೈಟಿಯ ರಜತ ಮಹೋತ್ಸವ ಕಾರ್ಯಕ್ರಮದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿದ್ದರು.

ಇದೇ ವೇಳೆ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ‘ನಿಮಗೆ ಸರ್ಕಾರ ಬೀಳುವುದರ ಬಗ್ಗೆ ಚಿಂತೆ ಇದೆ. ಅಷ್ಟೇ ವಿನಃ ಸರ್ಕಾರದ ಸಾಧನೆ ಬಗ್ಗೆ ನಿಮಗೆ ಕಾಳಜಿ ಇಲ್ಲ’ ಎಂದು ಹೇಳಿದರು.

ಜಾರಕಿಹೊಳಿ ಸಹೋದರರ ಬಂಡಾಯದ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ‘ಈ ಕುರಿತು ನೀವು ಅವರನ್ನೇ ಕೇಳುವುದು ಸೂಕ್ತ’ ಎಂದರು.

ಕಾರ್ಯಕ್ರಮದಲ್ಲಿ ಡಾ.ನಿರ್ಮಲಾನಂದ ಶ್ರೀಗಳು, ಪ್ರಸನ್ನ ನಾಥ ಶ್ರೀಗಳು, ಜಿಲ್ಲಾ ಉಸ್ತುವಾರಿ ಸಚಿವ ಡಿ.ಸಿ.ತಮ್ಮಣ್ಣ, ಸಹಕಾರ ಸಚಿವ ಬಂಡೆಪ್ಪ ಕಾಶೆಂಪುರ್ ಸೇರಿದಂತೆ ಹಲವು ನಾಯಕರು ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !