ಶುಕ್ರವಾರ, ನವೆಂಬರ್ 22, 2019
19 °C

ರೈತರಿಗೆ ಸಾಲಮನ್ನಾ ಮಾಹಿತಿ ನೀಡಲು ಎಚ್‌ಡಿಕೆ ಸಹಾಯವಾಣಿ

Published:
Updated:

ಬೆಂಗಳೂರು: ಬೆಳೆ ಸಾಲಮನ್ನಾ ಕುರಿತಂತೆ ಅಗತ್ಯ ಮಾಹಿತಿ ನೀಡಲು ಜೆಡಿಎಸ್ ನಾಯಕ ಎಚ್‌.ಡಿ.ಕುಮಾರಸ್ವಾಮಿ ‘ಬೆಳೆ ಸಾಲಮನ್ನಾ ಸಹಾಯವಾಣಿ’ ಆರಂಭಿಸಿದ್ದಾರೆ.

‘ಪ್ರತಿ ದಿನ ನೂರಾರು ರೈತರು ತಮ್ಮ ಬೆಳೆ ಸಾಲಮನ್ನಾ ವಿಚಾರವಾಗಿ ಮಾಹಿತಿ ಪಡೆಯಲು ನನ್ನ ಮನೆಗೆ ಬರುತ್ತಿದ್ದಾರೆ. ದೂರದೂರಿನಿಂದ ಬರುವ ರೈತರಿಗೆ ಕಷ್ಟವಾಗಬಾರದೆಂದು ನಾನು ರೈತರ ‘ಬೆಳೆ ಸಾಲಮನ್ನಾ ಸಹಾಯವಾಣಿ’ ಆರಂಭಿಸಿದ್ದೇನೆ. ರೈತರು ತಮ್ಮ ಮನೆಯಿಂದಲೇ 91643 05868 ನಂಬರ್‌ಗೆ ಬೆಳಿಗ್ಗೆ 10 ರಿಂದ 5ರವರೆಗೆ ಕರೆ ಮಾಡಿ ಸಾಲಮನ್ನಾದ ವಿವರ ಪಡೆಯಬಹುದು’ ಎಂದು ಕುಮಾರಸ್ವಾಮಿ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಬೆಳೆವಿಮೆ ರೈತರ ಸಾಲಕ್ಕೆ ಜಮಾ ಬೇಡ– ಜಗದೀಶ್ ಶೆಟ್ಟರ್ ಸೂಚನೆ

ಪ್ರತಿಕ್ರಿಯಿಸಿ (+)