ಮಂಗಳವಾರ, ಜುಲೈ 27, 2021
28 °C

ಎಚ್‌1ಎನ್‌1: 837 ಜನರಲ್ಲಿ ಸೋಂಕು ಪತ್ತೆ, ಎರಡು ತಿಂಗಳಲ್ಲಿ 14 ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ರಾಜ್ಯದಲ್ಲಿ ಎಚ್‌1ಎನ್‌1ನಿಂದಾಗಿ ಜನವರಿಯಿಂದ ಮಾರ್ಚ್‌ 11ರ ಅವಧಿಯಲ್ಲಿ 837 ಜನರಲ್ಲಿ ಸೋಂಕು ಪತ್ತೆಯಾಗಿದ್ದು, 14 ಜನ ಮೃತಪಟ್ಟಿದ್ದಾರೆ’ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ನಿರ್ದೇಶನಾಲಯ ತಿಳಿಸಿದೆ.

ನಿಮ್ಹಾನ್ಸ್‌, ಮಣಿಪಾಲ್‌ ಆಸ್ಪತ್ರೆ, ನಾರಾಯಣ, ಎನ್‌ಐವಿ, ಕಮಾಂಡೊ ಆಸ್ಪತ್ರೆ ಹಾಗೂ ಎಂಸಿವಿಆರ್‌ ಆಸ್ಪತ್ರೆಗಳ ಪ್ರಯೋಗಾಲಯಗಳು 3,392 ಜನರ ರಕ್ತ ಪರೀಕ್ಷೆ ಮಾಡಿದಾಗ 837 ಜನರಲ್ಲಿ ಸೋಂಕು ಇರುವುದನ್ನು ದೃಢಪಡಿಸಿವೆ.

ಸೋಂಕು ಪತ್ತೆಯಾದ ಅಗ್ರ ಜಿಲ್ಲೆಗಳ ಪೈಕಿ, ಉಡುಪಿ (104), ಮೈಸೂರು (74) ದಕ್ಷಿಣ ಕನ್ನಡ (71) ಹಾಗೂ ಶಿವಮೊಗ್ಗ (64) ಅಗ್ರಸ್ಥಾನ ಪಡೆದಿವೆ. ಆದರೆ, ಯಾದಗಿರಿ ಹಾಗೂ ಕೊಪ್ಪಳದಲ್ಲಿ ಒಂದು ಪ್ರಕರಣವೂ ದಾಖಲಾಗಿಲ್ಲ. 

2009ರಲ್ಲಿ 1,799 ಜನರಲ್ಲಿ ಎಚ್‌1ಎನ್‌1 ಸೋಂಕು ಪತ್ತೆಯಾಗಿದ್ದು, 135 ಜನ ಮೃತಪಟ್ಟಿದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು