ಗ್ರಾಮ ವಾಸ್ತವ್ಯ: ₹70.60 ಲಕ್ಷ ನೆರವು

ಮಂಗಳವಾರ, ಜೂಲೈ 16, 2019
28 °C

ಗ್ರಾಮ ವಾಸ್ತವ್ಯ: ₹70.60 ಲಕ್ಷ ನೆರವು

Published:
Updated:
Prajavani

ಬೆಂಗಳೂರು: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಇತ್ತೀಚೆಗೆ ನಡೆಸಿದ ಮೂರು ಗ್ರಾಮ ವಾಸ್ತವ್ಯಗಳ ಸಂದರ್ಭದಲ್ಲಿ ಆರೋಗ್ಯ ಮತ್ತಿತರ ಸಮಸ್ಯೆಗಳ ಕುರಿತು ಸಲ್ಲಿಸಿದ ಅಹವಾಲುಗಳ ಪೈಕಿ 89 ಜನರಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ₹70.60 ಲಕ್ಷ ನೆರವು ನೀಡಲಾಗಿದೆ.

ಯಾದಗಿರಿ ಜಿಲ್ಲೆಯ ಚಂಡರಕಿ ಗ್ರಾಮದಲ್ಲಿ 45 ಅರ್ಜಿ ದಾರರಿಗೆ ₹32.70 ಲಕ್ಷ, ರಾಯಚೂರು ಜಿಲ್ಲೆಯ ಕರೆಗುಡ್ಡ ಗ್ರಾಮದಲ್ಲಿ 28 ಜನರಿಗೆ ₹ 19.94 ಲಕ್ಷ ಹಾಗೂ ಬೀದರ್ ಜಿಲ್ಲೆಯ ಉಜಳಂಬ ಗ್ರಾಮದಲ್ಲಿ 16 ಜನರಿಗೆ ₹ 18.79 ಲಕ್ಷ ನೆರವು ನೀಡಲು ಮುಖ್ಯಮಂತ್ರಿಗಳು ಮಂಜೂರಾತಿ ನೀಡಿದ್ದಾರೆ.

ಇವರು ಮೂತ್ರಪಿಂಡ ಸಮಸ್ಯೆ, ಹೃದಯ ಸಂಬಂಧಿ ಕಾಯಿಲೆ ಮತ್ತಿತರ ವೈದ್ಯಕೀಯ ಸೌಲಭ್ಯಗಳು ಹಾಗೂ ಆರ್ಥಿಕ ನೆರವು ಕೋರಿ ಅರ್ಜಿ ಸಲ್ಲಿಸಿದ್ದರು.

ಈ ಮಧ್ಯೆ, ಮುಖ್ಯಮಂತ್ರಿ ಅವರು ಮಂಗಳವಾರ ಗೃಹ ಕಚೇರಿ ಕೃಷ್ಣಾದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು. 35 ಅರ್ಜಿಗಳನ್ನು ಸ್ವೀಕರಿಸಿ ಸಂಬಂಧಪಟ್ಟ ಇಲಾಖೆಗಳಿಗೆ ಕ್ರಮಕ್ಕಾಗಿ ಕಳುಹಿಸಲಾಯಿತು.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !