ಭಾನುವಾರ, ಜುಲೈ 25, 2021
21 °C
ಕೂಲಿ ಕೆಲಸ ಮಾಡಿ ಬದುಕುವವರಿಗೆ ಭಾರಿ ಹೊಡೆತ

ವರ್ಗಾವಣೆ ಪ್ರಮಾಣಪತ್ರಕ್ಕೆ ದುಬಾರಿ ಶುಲ್ಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು:‌ ಫಲಿತಾಂಶ ಬಂದ 15 ದಿನಗಳವರೆಗೆ ವರ್ಗಾವಣೆ ಪ್ರಮಾಣಪತ್ರವನ್ನು (ಟಿ.ಸಿ) ಉಚಿತವಾಗಿ ಹಾಗೂ ಬಳಿಕ ₹ 5  ಶುಲ್ಕ ಪಡೆದು ನೀಡಬೇಕೆಂಬ ನಿಯಮ ಇದ್ದರೂ, ಹಲವು ಶಾಲೆಗಳಲ್ಲಿ ₹ 100ರಿಂದ₹ 500 ತನಕ ವಸೂಲಿ ಮಾಡಲಾಗುತ್ತಿದೆ ಎಂದು ಪೋಷಕರು ದೂರಿದ್ದಾರೆ.

ವರ್ಗಾವಣೆ ಪ್ರಮಾಣಪತ್ರವನ್ನು ಇದೀಗ ‘ಸ್ಯಾಟ್ಸ್‌’ ಮೂಲಕ ಆನ್‌ಲೈನ್‌ನಲ್ಲಿ ರವಾನಿಸಲಾಗುತ್ತಿದೆ, ಹೀಗಾಗಿ ದುಡ್ಡು ಪಡೆಯುವ ಪ್ರಶ್ನೆ ಇಲ್ಲ ಎಂದು ಶಾಲೆಗಳು ಬಿಂಬಿಸುತ್ತಿದ್ದು, ಶಿಕ್ಷಣ ಇಲಾಖೆ ಅಧಿಕಾರಿಗಳೂ ಇದನ್ನೇ ನಂಬಿಕೊಂಡಿದ್ದಾರೆ. ಆದರೆ ವಾಸ್ತವ ಬೇರೆಯೇ ಇದೆ. ಟಿ.ಸಿಗೆ ಅರ್ಜಿ ಕೊಡುವಾಗಲೇ ಶುಲ್ಕ ಪಡೆಯುತ್ತಾರೆ, ಅದಕ್ಕೆ ರಸೀದಿ ಕೊಡುವುದಿಲ್ಲ. ಯಾರಿಗೆ ತುರ್ತಾಗಿ ಟಿ.ಸಿ ಬೇಕಾಗಿದೆಯೋ ಅವರಿಂದ ₹ 500 ಅಥವಾ ಅದಕ್ಕಿಂತ ಹೆಚ್ಚಿಗೆ ಹಣ ಪಡೆಯಲಾಗುತ್ತಿದೆ ಎಂದು ಕೊಪ‍್ಪಳ, ಬಳ್ಳಾರಿ, ದಾವಣಗೆರೆ ಭಾಗದ ಹಲವಾರು ಪೋಷಕರು ‘ಪ್ರಜಾವಾಣಿ’ ಕಚೇರಿಗೆ ಕರೆ ಮಾಡಿ ಅಳಲು ತೋಡಿಕೊಂಡಿದ್ದಾರೆ.

ಸರ್ಕಾರಿ ಮತ್ತು ಅನುದಾನಿತ ಪದವಿಪೂರ್ವ ಕಾಲೇಜುಗಳಲ್ಲಿ ಉಚಿತವಾಗಿ ಟಿ.ಸಿ ಕೊಡಬೇಕು. ಖಾಸಗಿ ಕಾಲೇಜುಗಳಲ್ಲಿ ₹ 25 ಶುಲ್ಕ ಪಡೆದು ಟಿ.ಸಿ ಕೊಡಬೇಕು ಎಂಬ ನಿಯಮ ಇದೆ. ಆದರೆ ಇಲ್ಲೆಲ್ಲೂ ಸಹ ಈ ನಿಯಮ ಪಾಲನೆಯಾಗದೆ ₹ 500 ತನಕವೂ ವಸೂಲು ಮಾಡಲಾಗುತ್ತಿದೆ ಎಂದು ಪೋಷಕರು ದೂರಿದ್ದಾರೆ.

‘ಅಧಿಕ ದುಡ್ಡು ಪಡೆದು ಟಿ.ಸಿ ನೀಡುತ್ತಿರುವ ಬಗ್ಗೆ ದಾಖಲೆ ಸಹಿತ ದೂರು ನೀಡಿದರೆ ಅಂತಹ ಶಾಲೆಗಳ ಮುಖ್ಯಸ್ಥರ ವಿರುದ್ಧ ಕ್ರಮ ಕೈಗೊಳ್ಳಬಹುದು, ಆದರೆ ನಮಗೆ ಅಂತಹ ದೂರುಗಳೇ ಬರುತ್ತಿಲ್ಲ’ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು