ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದಿನಿಂದ ಮೂರು ದಿನ ಬಣ್ಣದೋಕುಳಿ

ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ: ಬಣ್ಣದಲ್ಲಿ ಮಿಂದೇಳಲಿರುವ ಜನತೆ
Last Updated 9 ಮಾರ್ಚ್ 2020, 19:30 IST
ಅಕ್ಷರ ಗಾತ್ರ

ಬಾಗಲಕೋಟೆ: ರಣಬಿಸಿಲಿನ ನಡುವೆ ಸೋಮವಾರ ಬೆಳಗಿನ ಜಾವ ಹೋಳಿ ಹಬ್ಬಕ್ಕೆ ಚಾಲನೆ ದೊರೆತಿದೆ. ಇಂದಿನಿಂದ ಮೂರು ದಿನಗಳ ಕಾಲ ನಗರದ ಜನತೆ ಬಣ್ಣದಲ್ಲಿ ಮಿಂದೇಳಲಿದ್ದಾರೆ.

ಹುಬ್ಬಾ ನಕ್ಷತ್ರದ ದಿನದಂದು ರಾಮಚಂದ್ರ ಖಾತೆದಾರ ಅವರ ಮನೆಯಿಂದ ಬೆಂಕಿ ತಂದು ನಗರದ ಕಿಲ್ಲಾ ಚಾವಡಿಯಲ್ಲಿ ಮೊದಲು ಕಾಮದಹನ ಮಾಡುವ ಮೂಲಕ ರಂಗಿನೋಕುಳಿಗೆ ಹೋಳಿ ಆಚರಣೆ ಸಮಿತಿ ಅಧಿಕೃತವಾಗಿ ಚಾಲನೆ ನೀಡಿದೆ.

ನಂತರ ಸೋಮವಾರ ಹಳಪೇಟೆ, ಜೈನ್ ಪೇಟೆ, ಹೊಸಪೇಟೆ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಹಲಗಿ ಆರ್ಭಟದ ಹಿರಿಯ ಕಿರಿಯರೆಲ್ಲರೂ ಸೇರಿಕೊಂಡು ಪರಸ್ಪರ ಬಣ್ಣ ಎರಚುವ ಮೂಲಕ ಕಾಮದಹನ ಮಾಡಿದರು.

ದ್ವಿತೀಯ ಪಿಯುಸಿ ಪರೀಕ್ಷೆಗಳು ನಡೆದಿರುವುದನ್ನು ಬಿಟ್ಟು ನಗರದಲ್ಲಿನ ಎಲ್ಲ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಸತತ ಮೂರು ದಿನ ಬಣ್ಣ ನಡೆಯುವುದರಿಂದ ಹೆಚ್ಚಿನ ಅಂಗಡಿ ಮುಂಗ್ಗಟ್ಟುಗಳನ್ನು ಬಂದ್ ಆಗಲಿವೆ.

ಪ್ರವಾಸಕ್ಕೆ ತೆರಳುವವರ ಸಂಖ್ಯೆ ಇಳಿಕೆ

ನಗರದಲ್ಲಿ ನಡೆಯುವ ಮೂರು ದಿನದ ಹೋಳಿ ಆಚರಣೆ ವೇಳೆ ಇಡೀ ನಗರವೇ ಸ್ಥಬ್ಧವಾಗಿರುತ್ತದೆ. ಈ ಸಂದರ್ಭದಲ್ಲಿ ವ್ಯಾಪಾರ ವಹಿವಾಟು ಇರುವುದಿಲ್ಲ. ಹೆಚ್ಚಿನ ವ್ಯಾಪಾರಸ್ಥರು ಮೂರು ದಿನಗಳು ಹೊರ ರಾಜ್ಯ ಸೇರಿದಂತೆ ವಿದೇಶಕ್ಕೆ ತೆರಳುತ್ತಿದ್ದರು. ಈ ಬಾರಿ ಕೋವಿಡ್ 19 ಭೀತಿಯಿಂದ ಬಹುತೇಕರು ಪ್ರವಾಸಕ್ಕೆ ಹೋಗಿಲ್ಲ.

ಕೋವಿಡ್ 19 ಭೀತಿಯಿಂದ ಪೋಷಕರು ಪ್ರವಾಸಕ್ಕೆ ತೆರಳದಂತೆ ಸೂಚಿಸಿದ್ದಾರೆ. ಮೂರು ದಿನ ಸ್ನೇಹಿತರೊಂದಿಗೆ ಬಾದಾಮಿ, ಐಹೊಳೆ, ಆಲಮಟ್ಟಿಗೆ ತೆರಳುತ್ತಿದ್ದೇವೆ ಎನ್ನುತ್ತಾರೆ ವ್ಯಾಪಾರಿ ಶ್ರೀಕಾಂತ ಪಾಟೀಲ.

ಮದ್ಯ ಮಾರಾಟ ನಿಷೇಧ

ಹೋಳಿ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮಾರ್ಚ್ 10 ರಿಂದ 12ರವರೆಗೆ ನಗರದಲ್ಲಿ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಆಯಾ ತಾಲ್ಲೂಕುಗಳಲ್ಲಿ ಬಣ್ಣ ನಡೆಯುವ ದಿನ ಮದ್ಯ ಮಾರಾಟ ನಿಷೇಧಿಸಲಾಗಿದೆ.

ವಿವಿಧ ಓಣಿಗಳಲ್ಲಿ ಸಂಚರಿಸಲಿರುವ ಬಂಡಿಗಳು

ಮಾಚ್ 10ರಂದು ಮುಂಜಾನೆ ಪ್ರಾರಂಭವಾಗುವ ಬಣ್ಣದಾಟ ಕಿಲ್ಲಾದಿಂದ ಬಣ್ಣದ ಬಂಡಿಗಳು ಹೊರಡಲಿವೆ. ಮಾರ್ಚ್ 11 ರಂದು ಹಳಪೇಟೆ, ವೆಂಕಟಪೇಟೆ ಹಾಗೂ ಜೈನಪೇಟೆಗಳಲ್ಲಿ ಸಂಚರಿಸಲಿದ್ದು, ಬಣ್ಣದಾಟದ ಕೊನೆಯ ದಿನ ಹೊಸಪೇಟೆಯಲ್ಲಿ ಬಂಡಿಗಳು ಸಂಚರಿಸಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT