ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಜೆಟ್‌ನಲ್ಲಿ ಉತ್ತರ ಕರ್ನಾಟಕ ಭಾಗಕ್ಕೆ ಸಿಕ್ಕಿದ್ದು ಎಷ್ಟು?

Last Updated 5 ಜುಲೈ 2018, 8:53 IST
ಅಕ್ಷರ ಗಾತ್ರ

ಬೆಂಗಳೂರು: ಕಾಂಗ್ರೆಸ್ ಮತ್ತು ಜೆಡಿಎಸ್‌ ಮೈತ್ರಿ ಸರ್ಕಾರದ ಚೊಚ್ಚಲ ಬಜೆಟ್‌ನಲ್ಲಿ ಉತ್ತರ ಕರ್ನಾಟಕ ಭಾಗಕಕೆ ಸಿಕ್ಕ ಯೋಜನೆಗಳ ಹೈಲೈಟ್ಸ್‌ ಇಂತಿದೆ.

*ಗದಗ ಕೊಪ್ಪಳದಲ್ಲಿ ಇಸ್ರೆಲ್ ಮಾದರಿ ನೀರಾವರಿ ಸೌಲಭ್ಯ 5 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ನೀರಾವರಿ ಯೋಜನೆಯನ್ನು ಜಾರಿ ಮಾಡಲಾಗುವುದು.

*ಮೆಣಸಿನ ಕಾಯಿ, ಗೋಡಂಬಿ, ಕಾಳು ಮೆಣಸು, ಜೀರಿಗೆ, ಕೊತ್ತಂಬರಿ ಮತ್ತು ಮೆಂತೆಯ ದೀರ್ಘಕಾಲ ಸಂರಕ್ಷಣೆಗೆ ನಿರ್ವಾತ ತಂತ್ರಜ್ಞಾನ ಘಟಕವನ್ನು ಈ ಭಾಗದಲ್ಲಿ ಸ್ಥಾಪಿಸಲಾಗುವುದು.

*ಧಾರವಾಡ ಕೃಷಿ ವಿವಿಗೆ 3 ಕೋಟಿ ರೂಪಾಯಿ ಅನುದಾನ

*ಕಾರವಾರ, ಯಾದಗಿರಿ, ಹಾವೇರಿ ಜಿಲ್ಲೆಗಳಲಿ ಇಸ್ರೆಲ್ ಮಾದರಿ ನೀರಾವರಿ ಯೋಜನೆಗೆ 150 ರೂಪಾಯಿ ಮೀಸಲು

*ಧಾರವಾಡ, ಕಲಬುರಗಿಯಲ್ಲಿ ಘನೀಕೃತ ವೀರ್ಯ ನಳಿಕೆಗಳ ವಿತರಣಾ ಕೇಂದ್ರ ಸ್ಥಾಪನೆಗೆ 2.25 ಕೋಟಿ ವೆಚ್ಚ

*ಹಂಪಿಯಲ್ಲಿ ಪ್ರವಾಸೋದ್ಯಮ ವಿಶ್ವವಿದ್ಯಾಲಯಕ್ಕೆ 3 ಕೊಟಿ ರೂಪಾಯಿ ಮೀಸಲು.

*ವಿಜಯಪುರ ಜಿಲಾಸ್ಪತ್ರೆಯಲ್ಲಿ ಕಾರ್ಡಿಯಾಲಜಿ ಮತ್ತು ಅಂಕಾಲಜಿಗೆ ಸಂಬಂಧಿಸಿದ ಆರೋಗ್ಯ ಸೇವೆಗಳ ಘಟಕ ಮತ್ತು ಟ್ರಾಮಾ ಘಟಕ ಆರಂಭ.

*ಬೆಳಗಾವಿ ಕಲಬುರಗಿ ಹೃದ್ರೋಗ ಮತ್ತು ಕ್ಯಾನ್ಸರ್ ತೃತಿಯ ಹಂತದ ಆರೋಗ್ಯ ಸೇವೆಗಳನ್ನು ಒದಗಿಸಲು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ

*ಗದಗ, ಕೊಪ್ಪಳದಲ್ಲಿ ಸೂಪರ್ ಸ್ಪೆಷಲ್ ಆಸ್ಪತ್ರೆ

*ಕೊಪ್ಪಳದಲ್ಲಿ ಆಟಿಕೆ ತಯಾರಿಕ ಘಟಕ

*ವಸ್ತ್ರೋಧ್ಯಮ ಪ್ರೋತ್ಸಾಹ ಧನ ಯೋಜನೆ ಅಡಿ ಬಳ್ಳಾರಿಯಲ್ಲಿ ಟೆಕ್ಸ್‌ಟೈಲ್‌ ತಯಾರಿಕಾ ಘಟಕ

*ಕಲಬುರಗಿ ಜಿಲ್ಲೆಯನ್ನು ಭಾರತದ ಸೋಲಾರ್‌ ಜಿಲ್ಲೆಯಾಗಿ ಅಭಿವೃದ್ಧಿ

* ಕಲಬುರಗಿ ನಗರದಲ್ಲಿ ಖಾಸಗಿ ತರಬೇತಿ ಕೇಂದ್ರಗಳ ಸಹಯೋಗದೊಂದಿಗೆ ಎಸ್ಸಿ ಎಸ್ಟಿ ಪದವೀಧರರಿಗೆ ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ ನೀಡಲು ನೆರವು

* ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಗ್ರಾಮಗಳಿಗೆ ನೀರಾವರಿ ಕಲ್ಪಿಸಲು 100 ಕೋಟಿ ಮೀಸಲು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT