ಮಂಗಳವಾರ, ಮೇ 18, 2021
28 °C

‘ಪ್ರಕೃತಿ ವಿಕೋಪಕ್ಕೆ ಮನುಷ್ಯನ ತಪ್ಪುಗಳೇ ಕಾರಣ’: ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಪ್ರಕೃತಿ ವಿಕೋಪಕ್ಕೆ ಮನುಷ್ಯನ ತಪ್ಪುಗಳೇ ಕಾರಣ. ಇನ್ನಾದರೂ ನಾವು ಎಚ್ಚೆತ್ತುಕೊಳ್ಳಬೇಕು’ ಎಂದು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಮೌಖಿಕ ಅಭಿಪ್ರಾಯ ವ್ಯಕ್ತಪಡಿಸಿದರು.

‘ಕಾರ್ಕಳ ತಾಲ್ಲೂಕಿನ ಕಣಜಾರು ಗ್ರಾಮದ ಕ್ವಾರಿಯಿಂದ ಸಮೀಪದ ಹಳ್ಳದ ನೀರು ಕಲುಷಿತಗೊಳ್ಳುತ್ತಿದೆ’ ಎಂಬ ಪ್ರಕರಣದಲ್ಲಿ ವಕೀಲ ಕೆ. ಚಂದ್ರನಾಥ ಅರಿಗ ಅವರು ಸೋಮವಾರ ವಾದ ಮಂಡಿಸುತ್ತಿದ್ದ ವೇಳೆ ದಿನೇಶ್ ಮಾಹೇಶ್ವರಿ ಈ ಅಭಿಪ್ರಾಯ ವ್ಯಕ್ತಪಡಿಸಿದರು.

ಕೇರಳ ಮತ್ತು ಕೊಡಗಿನ ಪ್ರವಾಹ ಪರಿಸ್ಥಿತಿಯನ್ನು ಉಲ್ಲೇಖಿಸಿದ ಮುಖ್ಯ ನ್ಯಾಯಮೂರ್ತಿಗಳು, ‘ಪ್ರಕೃತಿಗೇ ಆಪತ್ತು ಬಂದೊದಗಿದೆ‌. ಇದು ಏಕಾಏಕಿ ಒಂದು ದಿನ ಆಗಿರುವುದಲ್ಲ ಇದರ ಹಿಂದೆ ಮಾನವ ನಿರ್ಮಿತ ತಪ್ಪುಗಳಿವೆ’ ಎಂದರು.

‘ಭೂ ಕಂಪನ ಆಗಿದ್ದರೆ ಏಕಾಏಕಿ ಆಗಿದೆ ಎಂದು ಹೇಳಬಹುದು. ಆದರೆ, ಈ ರೀತಿ ಬೆಟ್ಟಗುಡ್ಡಗಳ ಕುಸಿತ, ಪ್ರವಾಹದಿಂದ ಉಕ್ಕಿ ಹರಿಯುತ್ತಿರುವ ನೀರು ಮತ್ತು ವಿಕೋಪಗಳಿಗೆ ಎಲ್ಲೋ ನಾವೇ ಕಾರಣ ಎಂಬುದನ್ನು ಒತ್ತಿ ಹೇಳುತ್ತಿದೆ’ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು