ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿಪ್ಪು ಜಯಂತಿಗೆ ನನ್ನ ವಿರೋಧವಿದೆ: ಮೊಯಿಲಿ

Last Updated 2 ನವೆಂಬರ್ 2019, 13:01 IST
ಅಕ್ಷರ ಗಾತ್ರ

ಬೆಂಗಳೂರು: ವೈಯಕ್ತಿಕವಾಗಿ ಟಿಪ್ಪು ಜಯಂತಿ ಆಚರಣೆಗೆ ನನ್ನ ವಿರೋಧವಿದೆ. ಟಿಪ್ಪು ಜಯಂತ್ಯೋತ್ಸವ ಮಾಡಲಿ ಬಿಡಲಿ ಅದು ಸರ್ಕಾರಕ್ಕೆ ಬಿಟ್ಟದ್ದು. ಆದರೆ ಇಲ್ಲಿ ಪ್ರಶ್ನೆ ಇರೋದು ಪಠ್ಯದಲ್ಲಿ ಟಿಪ್ಪು ಇತಿಹಾಸ ಕಿತ್ತು ಹಾಕೋದು.

‘ಆದಿಲ್‌ಶಾಹಿ, ಹೈದರಾಲಿಯ ಇತಿಹಾಸ ಕಿತ್ತು ಹಾಕ್ತಾರಾ. ಹಾಗಿದ್ದರೆ ಎಲ್ಲಿಂದ ಎಲ್ಲಿಗೆ ಇತಿಹಾಸ ತೆಗೆಯುತ್ತೇವೆ ಎಂಬುದನ್ನು ಬಿಜೆಪಿಯವರು ಹೇಳಬೇಕು. ಏಕೆಂದರೆ ಬ್ರಿಟಿಷರ ವಿರುದ್ಧ ಮೊದಲು ಹೋರಾಟ ಮಾಡಿದ್ದು ಟಿಪ್ಪು. ರಾಷ್ಟ್ರ ಉಳಿಸಿಕೊಳ್ಳಲು ಮಕ್ಕಳನ್ನು ಅಡವಿಟ್ಟ ತ್ಯಾಗಿ ಟಿಪ್ಪು‘ ಎಂದು ಬಣ್ಣಿಸಿದ ಅವರು, ‘ಸ್ವಾತಂತ್ರ್ಯ ಹೋರಾಟದಲ್ಲಿ ಟಿಪ್ಪು ಇತಿಹಾಸ ಅವಿಭಾಜ್ಯ ಅಂಗವಾಗಿದೆ. ಮತೀಯತೆ ಆಧಾರದ ಮೇಲೆ ಇತಿಹಾಸ ಬರೆಯುವ ಪ್ರವೃತ್ತಿಯ ದುರಂತ ಪ್ರಜಾಪ್ರಭುತ್ವದಲ್ಲಿ ಮತ್ತೊಂದಿಲ್ಲ‘ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT