ಗುರುವಾರ , ಏಪ್ರಿಲ್ 9, 2020
19 °C

ಸಚಿವ ಸ್ಥಾನ ಸಿಗದಿರುವುದಕ್ಕೆ ಬೇಸರವಿದೆ: ಶಾಸಕ ಮಹೇಶ್ ಕುಮಠಳ್ಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೋಳೆ (ಬೆಳಗಾವಿ ಜಿಲ್ಲೆ): ‘ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವಲ್ಲಿ ನನ್ನ ಪಾತ್ರವೂ ಇದೆ. ಸಚಿವ ಸ್ಥಾನ ಕೊಡಬೇಕಿತ್ತು. ಆದರೆ ಕೊಟ್ಟಿಲ್ಲ. ಅಂದ ಮಾತ್ರಕ್ಕೆ ಅಸಮಾಧಾನಗೊಂಡಿಲ್ಲ. ಮನಸ್ಸಿಗೆ ಸ್ವಲ್ಪ ಬೇಸರವಾಗಿದೆ’ ಎಂದು ಅಥಣಿ ಶಾಸಕ ಮಹೇಶ ಕುಮಠಳ್ಳಿ ಹೇಳಿದರು.

ಸಮೀಪದ ಸಪ್ತಸಾಗರದಲ್ಲಿ ಬುಧವಾರ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.

‘ಸಚಿವ ಸ್ಥಾನ ಸಿಗದೇ ಇರುವುದರಿಂದ ಅಸಮಾಧಾನಗೊಂಡಿದ್ದೇನೆ ಎಂದು ಮಾಧ್ಯಮದಲ್ಲಿ ಬಂದಿದೆ. ಅದು ಸತ್ಯಕ್ಕೆ ದೂರವಾದದ್ದು. ಯಾರ ಮೇಲೂ ಮುನಿಸಿಕೊಳ್ಳುವ ವ್ಯಕ್ತಿ ನಾನಲ್ಲ. ಮುಖ್ಯಮಂತ್ರಿ ಹಾಗೂ ಹೈಕಮಾಂಡ್ ಕೊಟ್ಟ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತೇನೆ. ಸದ್ಯ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಆಸಕ್ತಿ ವಹಿಸಿದ್ದೇನೆ’ ಎಂದರು.

ಅವರಖೋಡ, ಶೇಗುಣಸಿಯ ವಿವಿಧ ಗ್ರಾಮಗಳಲ್ಲಿ ಕಾಂಕ್ರಿಟ್ ರಸ್ತೆ ಕಾಮಗಾರಿಗೆ ಚಾಲನೆ ನೀಡಿದರು. ಲೋಕೋಪಯೋಗಿ ಇಲಾಖೆ ಅಧಿಕಾರಿ ಜಿ.ಎಸ್. ಸೂರ್ಯವಂಶಿ, ಎ.ಜಿ. ಮುಲ್ಲಾ, ಜಿ.ಎಂ. ಗುಳಪ್ಪನವರ, ಶೇಖರ ಕರಬಸಪ್ಪಗೋಳ, ಶಿವರುದ್ರ ಗುಳಪ್ಪನವರ, ಪ್ರಮೋದ ಕರಬಸಪ್ಪಗೋಳ, ಪ್ರಕಾಶ ಚನ್ನಣ್ಣವರ, ಅಲಗೌಡ ಪಾಟೀಲ, ಮಲ್ಲಿಕಾರ್ಜುನ ಅಂದಾಣಿ, ಅಶೋಕ ಕರಬಸಪ್ಪಗೋಳ, ಅಮೂಲ ನಾಯಿಕ, ಆರ್.ಎ. ಪಾಟೀಲ, ಅಶೋಕ ಐಗಳಿ, ರಮೇಶ ಪಾಟೀಲ, ರಾವಸಾಬ ಚುನಾರ, ಡಿ.ಬಿ. ನದಾಫ್, ಕುಮಾರ ಬಮ್ಮನವರ, ಆರ್.ಎ. ಪಾಟೀಲ, ಅಶೋಕ ಐಗಳಿ, ರಮೇಶ ಪಾಟೀಲ, ಡಿ.ಬಿ. ನದಾಫ್, ಕೇಸಪ್ಪ ಕಾಂಬಳೆ, ನಿಂಗಣ್ಣ ನಂದೇಶ್ವರ, ಸಂಗಮೇಶ ಇಂಗಳಿ, ಈರನಗೌಡ ಪಾಟೀಲ, ಬಸುಗೌಡ ಪಾಟೀಲ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು