ಗುರುವಾರ , ಜೂಲೈ 9, 2020
26 °C

15 ಐಎಎಸ್ ಅಧಿಕಾರಿಗಳ ವರ್ಗಾವಣೆ: ನಾಲ್ಕು ಜಿಲ್ಲೆಗಳ ಜಿಲ್ಲಾಧಿಕಾರಿ ಬದಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಾಲ್ಕು ಜಿಲ್ಲಾಧಿಕಾರಿಗಳು ಸೇರಿದಂತೆ 15 ಐಎಎಸ್‌ ಅಧಿಕಾರಿಗಳನ್ನು ಸರ್ಕಾರ ವರ್ಗಾವಣೆ ಮಾಡಿದೆ. 

ವರ್ಗಾವಣೆಗೊಂಡವರು: ಪಿ. ವಸಂತಕುಮಾರ್, ಆಯುಕ್ತ, ಅವರನ್ನು ಬೆಂಗಳೂರು ಮೆಟ್ರೊಪಾಲಿಟನ್‌ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ (ಬಿಎಂಆರ್‌ಡಿಎ). ಡಾ.ಎಂ.ಟಿ.ರೇಜು- ನಿರ್ದೇಶಕ, ರಾಷ್ಟ್ರೀಯ ಜೀವನೋಪಾಯ ಮಿಷನ್‌ (ನ್ಯಾಷನಲ್‌ ಲೈವ್ಲಿಹುಡ್‌ ಮಿಷನ್). ದೀಪಾ.ಎಂ–ಯೋಜನಾ ನಿರ್ದೇಶಕಿ, ಸರ್ವ ಶಿಕ್ಷಣ ಅಭಿಯಾನ. ಎಸ್‌.ಜಿಯಾವುಲ್ಲಾ–ರಿಜಿಸ್ಟ್ರಾರ್‌, ಸಹಕಾರ ಸಂಘಗಳು. ಡಾ.ಬಿ.ಆರ್‌.ಮಮತಾ– ವ್ಯವಸ್ಥಾಪಕ ನಿರ್ದೇಶಕಿ, ಮೈಶುಗರ್‌. ಎಂ.ಜಿ.ಹಿರೇಮಠ, ಜಿಲ್ಲಾಧಿಕಾರಿ, ಬೆಳಗಾವಿ. ಪಿ. ಸುನೀಲ್ ಕುಮಾರ್‌–ವಿಶೇಷ ಆಯುಕ್ತ (ಹಣಕಾಸು, ಐಟಿ), ಬಿಬಿಎಂಪಿ, ಬೆಂಗಳೂರು.

ಸುಂದರೇಶಬಾಬು ಎಂ– ಜಿಲ್ಲಾಧಿಕಾರಿ, ಗದಗ. ಪವನ್‌ ಕುಮಾರ್‌.ಎಂ – ಹೆಚ್ಚುವರಿ ಆಯುಕ್ತ, ವಾಣಿಜ್ಯ ತೆರಿಗೆಗಳು(ಜಾರಿ), ಬೆಂಗಳೂರು. ವಿಶಾಲ್ ಕಿಶೋರ್ ಸುರಾಲ್‌ಕರ್‌ –ಜಿಲ್ಲಾಧಿಕಾರಿ, ಕೊಪ್ಪಳ. ನಿತೇಶ್‌ ಪಾಟೀಲ–ಜಿಲ್ಲಾಧಿಕಾರಿ, ಧಾರವಾಡ. ಚಂದ್ರ
ಶೇಖರ ನಾಯಕ್– ಉಪಕಾರ್ಯದರ್ಶಿ, ಹಣಕಾಸು ಇಲಾಖೆ(ಬಜೆಟ್‌ ಮತ್ತು ಸಂಪನ್ಮೂಲ). ಭೂಬಾಲನ್ ಟಿ– ಸಿಇಒ, ಬಾಗಲ
ಕೋಟೆ ಜಿಲ್ಲಾ ಪಂಚಾಯಿತಿ. ಗಂಗೂಬಾಯಿ‌ ರಮೇಶ್‌ ಮಾನಕರ‌–ನಿರ್ದೇಶಕಿ, ಅಟಲ್‌ ಜನಸ್ನೇಹಿ ಕೇಂದ್ರ, ಬೆಂಗಳೂರು. ಎಸ್‌. ಹೊನ್ನಾಂಬಾ– ಯೋಜನಾ ನಿರ್ದೇಶಕಿ, ಕರ್ನಾಟಕ ಏಡ್ಸ್‌ ನಿಯಂತ್ರಣ ಸೊಸೈಟಿ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು