ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್‌: ಅಶ್ಲೀಲ ಚಿತ್ರಗಳ ವೀಕ್ಷಣೆ ಪ್ರಮಾಣ ಹೆಚ್ಚಳ, ಅಪಾಯದಲ್ಲಿ ಮಕ್ಕಳು!

ಎಚ್ಚರಿಸಿದ ‘ಇಂಡಿಯನ್‌ ಚೈಲ್ಡ್‌ ಪ್ರೊಟೆಕ್ಷನ್ ಫಂಡ್‌’ ಸಮೀಕ್ಷಾ ವರದಿ
Last Updated 18 ಏಪ್ರಿಲ್ 2020, 4:21 IST
ಅಕ್ಷರ ಗಾತ್ರ
ADVERTISEMENT
""

ಬೆಂಗಳೂರು: ಕೊರೊನಾ ಲಾಕ್‌ಡೌನ್‌ ಸಮಯದಲ್ಲಿ ಅಶ್ಲೀಲ ಚಿತ್ರಗಳ (ಬ್ಲೂ ಫಿಲ್ಮ್‌), ಅದರಲ್ಲೂ ಮಕ್ಕಳ ಅಶ್ಲೀಲ ಚಿತ್ರಗಳ(ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಚಿತ್ರ) ವೀಕ್ಷಣೆ ಹೆಚ್ಚಾಗಿದೆಎಂದು ವರದಿಯೊಂದು ಹೇಳಿದೆ.

ನಾನಾ ಬಗೆಯ ಮಕ್ಕಳ ಅಶ್ಲೀಲ ಚಿತ್ರಗಳಿಗಾಗಿ ಆನ್‌ಲೈನ್‌ನಲ್ಲಿ ಜಾಲಾಡಿದವರಸಂಖ್ಯೆ ಲಾಕ್‌ಡೌನ್‌ ಸಮಯದಲ್ಲಿ ಗಣನೀಯವಾಗಿ ಹೆಚ್ಚಾಗಿರುವುದನ್ನು ಆನ್‌ಲೈನ್‌ ಡೇಟಾ ಮಾನಿಟರಿಂಗ್‌ ವೆಬ್‌ಸೈಟ್‌ಗಳು ಗಮನಿಸಿವೆ.

ಮಕ್ಕಳ ಅಶ್ಲೀಲ ಚಿತ್ರಗಳ ವೀಕ್ಷಣೆಯಲ್ಲಿ ಬೆಂಗಳೂರು ಕೂಡ ಮುಂಚೂಣಿಯಲ್ಲಿರುವ ಮತ್ತೊಂದು ಆತಂಕಕಾರಿ ವಿಷಯವನ್ನು ಇಂಡಿಯನ್‌ ಚೈಲ್ಡ್‌ ಪ್ರೊಟೆಕ್ಷನ್ ಫಂಡ್‌ (ಐಸಿಪಿಎಫ್‌) ವರದಿ ಬಹಿರಂಗಗೊಳಿಸಿದೆ.

ಎರಡು ದಿನಗಳ ಹಿಂದೆ ಬಿಡುಗಡೆಯಾದ ಈ ಪಟ್ಟಿಯಲ್ಲಿ ಬೆಂಗಳೂರು ಜೆತೆಗೆದಕ್ಷಿಣ ಭಾರತದ ಕೊಚ್ಚಿ, ತಿರುವನಂತಪುರ, ಚೆನ್ನೈ ಹೆಸರು ಕೂಡ ಇವೆ.

ಮಾರ್ಚ್‌ 24ರಿಂದ 26ರ ಅವಧಿಯಲ್ಲಿ ಭಾರತದಲ್ಲಿ ಆನ್‌ಲೈನ್‌ ತಾಣಗಳಲ್ಲಿ ಮಕ್ಕಳ ಅಶ್ಲೀಲ ಚಿತ್ರಗಳಿಗಾಗಿ ಶೋಧಿಸಿದವರ ಸಂಖ್ಯೆ ಶೇ 95ರಷ್ಟು ಹೆಚ್ಚಾಗಿದೆ ಎಂಬ ಕಳವಳಕಾರಿ ವಿಷಯ ವಿಶ್ವದ ಅತಿದೊಡ್ಡ ಲೈಂಗಿಕ ಮತ್ತು ಅಶ್ಲೀಲಚಿತ್ರಗಳ ವೆಬ್‌ಸೈಟ್‌ ‘ಪೋರ್ನ್‌ ಹಬ್‌’ ಅಂಕಿ, ಸಂಖ್ಯೆಗಳಿಂದ ಬೆಳಕಿಗೆ ಬಂದಿದೆ.

ವಿಕೃತ ಕಾಮಿಗಳು, ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸುವ ಅತ್ಯಾಚಾರಿಗಳು, ನಿರಂತರವಾಗಿ ಮಕ್ಕಳ ಅಶ್ಲೀಲ ಚಿತ್ರಗಳನ್ನು ವೀಕ್ಷಿಸುವವರು ಈ ಸಮಯದಲ್ಲಿ ಆನ್‌ಲೈನ್‌ ತಾಣಗಳಲ್ಲಿ ಬ್ಯುಸಿಯಾಗಿದ್ದಾರೆ. ಇದರಿಂದ ಮಕ್ಕಳು ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುವ ಅಪಾಯ ಹೆಚ್ಚಾಗಿದೆ ಎಂದು ವರದಿ ಎಚ್ಚರಿಕೆ ನೀಡಿದೆ.

ಮಕ್ಕಳು ಇಂಟರ್‌ನೆಟ್‌ ಬಳಸುವುದು ಸುರಕ್ಷಿತವಲ್ಲ. ಇದರಿಂದ ಅಪಾಯಕ್ಕೆ ಸಿಲುಕುವ ಸಾಧ್ಯತೆ ಹೆಚ್ಚು. ಆದ್ದರಿಂದ ಈ ಸಮಯದಲ್ಲಿ ಮಕ್ಕಳ ಸುರಕ್ಷತೆಗೆ ಪೋಷಕರು ಮುಂಜಾಗ್ರತೆ ವಹಿಸುವುದು ಅಗತ್ಯ ಎಂದು ವರದಿ ಕಿವಿಮಾತು ಹೇಳಿದೆ.

ಅಂತರ್ಜಾಲ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಚಿತ್ರಗಳುಮುಕ್ತವಾಗಿ ಹರಿದಾಡುತ್ತಿವೆ. ಇವು ಹದಿ ಹರೆಯದ ಮಕ್ಕಳ ಮನಸ್ಸಿನ ಮೇಲೆ ದುಷ್ಪರಿಣಾಮ ಬೀರುತ್ತವೆ. ಈ ಪ್ರವೃತ್ತಿಗಳಿಗೆ ಕೂಡಲೇ ಕಾನೂನು ರೀತಿ ಕಡಿವಾಣ ಹಾಕುವ ಅಗತ್ಯವಿದೆ ಎಂದು ಐಸಿಪಿಎಫ್‌ ಶಿಫಾರಸು ಮಾಡಿದೆ.

ಮಕ್ಕಳ ಅಶ್ಲೀಲ ಚಿತ್ರಗಳ ವೀಕ್ಷಣೆಯಲ್ಲಿ ಮುಂಚೂಣಿಯಲ್ಲಿರುವ ದೇಶದ ನಗರಗಳು


‘ಕಾಳಜಿ ಅಗತ್ಯ’
ಲಾಕ್‌ಡೌನ್‌ನ 11 ದಿನಗಳ ಅವಧಿಯಲ್ಲಿ ದೇಶದಾದ್ಯಂತ ಮಕ್ಕಳ ಸಹಾಯವಾಣಿಗೆ ನೆರವು ಕೋರಿ 92 ಸಾವಿರಕ್ಕೂ ಹೆಚ್ಚು ಕರೆಗಳು ಬಂದಿವೆ. ಅವೆಲ್ಲವೂ ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಮತ್ತು ಹಿಂಸೆಗೆ ಸಂಬಂಧಿಸಿದ್ದಾಗಿವೆ. ಪೋಷಕರು ಮಕ್ಕಳ ಸುರಕ್ಷತೆ ಬಗ್ಗೆ ಹೆಚ್ಚು ಕಾಳಜಿವಹಿಸುವುದು ಅಗತ್ಯ.
-ನಿವೇದಿತಾ ಅಹುಜಾ,ವಕ್ತಾರ, ಐಸಿಪಿಎ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT