ಭಾನುವಾರ, ಡಿಸೆಂಬರ್ 15, 2019
24 °C

ಐಸಿಎಸ್‌ಇ, ಐಎಸ್‌ಸಿ: ಪರೀಕ್ಷಾ ವೇಳಾಪಟ್ಟಿ ಪ್ರಕಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಇಂಡಿಯನ್‌ ಸರ್ಟಿಫಿಕೆಟ್‌ ಆಫ್‌ ಸೆಕಂಡರಿ ಎಜುಕೇಶನ್‌ (ಐಸಿಎಸ್‌ಇ) ಪಠ್ಯಕ್ರಮದ 10ನೇ ತರಗತಿ ಮತ್ತು ಇಂಡಿಯನ್‌ ಸ್ಕೂಲ್‌ ಸರ್ಟಿಫಿಕೆಟ್‌ (ಐಎಸ್‌ಸಿ) ಪಠ್ಯಕ್ರಮದ 12ನೇ ತರಗತಿ ಪರೀಕ್ಷೆಗಳು ಫೆಬ್ರುವರಿಯಿಂದ ಆರಂಭವಾಗಲಿವೆ.

ಕೌನ್ಸಿಲ್‌ ಫಾರ್‌ ಇಂಡಿಯನ್‌ ಸ್ಕೂಲ್‌ ಸರ್ಟಿಫಿಕೆಟ್‌ ಎಕ್ಸಾಮಿನೇಷನ್ಸ್‌ (ಸಿಐಎಸ್‌ಸಿಇ) ಸೋಮವಾರ ಪರೀಕ್ಷಾ ವೇಳಾಪಟ್ಟಿ ಪ್ರಕಟಿಸಿದ್ದು, ಸುಮಾರು ಒಂದು ತಿಂಗಳ ಕಾಲ ಪರೀಕ್ಷೆ ನಡೆಯಲಿವೆ.

2019ರ ಫೆಬ್ರುವರಿ 22ರಿಂದ 10ನೇ ತರಗತಿ ಪರೀಕ್ಷೆ  ಆರಂಭವಾಗಲಿದೆ. 12ನೇ ತರಗತಿ ಪರೀಕ್ಷೆ ಫೆಬ್ರುವರಿ 4ರಿಂದ ಆರಂಭವಾಗಲಿದೆ. ಫಲಿತಾಂಶ ಪ್ರಕಟಿಸುವ ದಿನಾಂಕವನ್ನು ನಂತರ ತಿಳಿಸುವುದಾಗಿ ಹೇಳಿದೆ.

ವೇಳಾಪಟ್ಟಿಗಾಗಿ ಮಂಡಳಿಯ ವೆಬ್‌ಸೈಟ್‌ ಪರಿಶೀಲಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು