ಗುರುವಾರ , ಮೇ 26, 2022
23 °C

ಜೆಇಇ ಅಡ್ವಾನ್ಸ್‌: ಚೌಗಲಾ ಕಾಲೇಜಿನ 118 ವಿದ್ಯಾರ್ಥಿಗಳು ಅರ್ಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಇಲ್ಲಿನ ಚೌಗುಲಾ ಶಿಕ್ಷಣ ಸಂಸ್ಥೆಯ ವಿದ್ಯಾನಿಕೇತನ ಪದವಿಪೂರ್ವ ವಿಜ್ಞಾನ ಕಾಲೇಜಿನ 118 ವಿದ್ಯಾರ್ಥಿಗಳು ಜೆಇಇ ಅಡ್ವಾನ್ಸ್‌ಗೆ ಅರ್ಹತೆ ಪಡೆದಿದ್ದಾರೆ.

ವಿದ್ಯಾರ್ಥಿ ಮಹಾಂತೇಶ ಬಿ. ನಾಯಕ ರಾಷ್ಟ್ರಮಟ್ಟದಲ್ಲಿ 120ನೇ ರ‍್ಯಾಂಕ್‌ ಪಡೆದಿದ್ದಾರೆ. ಏಳು ವಿದ್ಯಾರ್ಥಿಗಳು ಶೇ 95ಕ್ಕಿಂತ ಹೆಚ್ಚು ಅಂಕ ಪಡೆದಿದ್ದಾರೆ. 30 ವಿದ್ಯಾರ್ಥಿಗಳು ಶೇ 90, 54 ವಿದ್ಯಾರ್ಥಿಗಳು ಶೇ 85ರಿಂದ 90 ಅಂಕ ಗಳಿಸಿದ್ದಾರೆ.

ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಕಾರ್ಯದರ್ಶಿ ಪ್ರೊ. ಅನಿಲಕುಮಾರ ಚೌಗಲಾ, ಕಾರ್ಯಾಧ್ಯಕ್ಷೆ ‍ಶ್ರೀದೇವಿ ಚೌಗುಲಾ, ನಿರ್ದೇಶಕರಾದ ಡಾ. ರಮೇಶ ಭಂಡಿವಾಡ, ಗಂಗಾಧರ ಕಮಡೊಳ್ಳಿ, ಪ್ರಾಚಾರ್ಯ ಡಾ. ಆನಂದ ಡಿ. ಮುಳಗುಂದ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು