ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ FB Live: ಈಶ್ವರಪ್ಪ ಎದುರು ಸಮಸ್ಯೆಗಳ ಮಹಾಪೂರ

ಕುಡಿಯುವ ನೀರು, ಉದ್ಯೋಗ ಖಾತ್ರಿ ಯೋಜನೆಯ ದೂರುಗಳೇ ಹೆಚ್ಚು
Last Updated 25 ಏಪ್ರಿಲ್ 2020, 8:08 IST
ಅಕ್ಷರ ಗಾತ್ರ

ಬೆಂಗಳೂರು: ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರು, ಉದ್ಯೋಗ ಖಾತ್ರಿ ಯೋಜನೆ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಕೈಗೊಂಡ ಕ್ರಮಗಳೇನು? ಎಂಬುದರ ಬಗ್ಗೆ ಪ್ರಜಾವಾಣಿ ಫೋನ್‌–ಇನ್‌ನಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌ ಈಶ್ವರಪ್ಪ ಮಾತನಾಡಿದರು.

ಗ್ರಾಮೀಣ ಪ್ರದೇಶಗಳಿಂದ ನೂರಾರು ಜನರು ಸಚಿವರಿಗೆ ಕರೆ ಮಾಡಿದ್ದರು. ವಸತಿ, ಕುಡಿಯುವ ನೀರು, ಕೆರೆ ಅಭಿವೃದ್ಧಿ, ಉದ್ಯೋಗ ಖಾತ್ರಿ ಯೋಜನೆಗಳಿಗೆ ಸಂಬಂಧಿಸಿದಂತೆ ಹಲವಾರು ಪ್ರಶ್ನೆಗಳನ್ನು ಕೇಳಿದರು. ಇದಕ್ಕೆ ಸಚಿವರು ಸಮಸ್ಯೆಗಳನ್ನು ಬಗೆಹರಿಸುವ ಭರವಸೆ ನೀಡಿದರು.

* ನೂರಾರು ಜನರು ಶುದ್ಧ ಕುಡಿಯುವ ನೀರಿನ ಘಟಕದ ದುರಸ್ತಿ ಬಗ್ಗೆ ಪ್ರಶ್ನೆಗಳನ್ನು ಕೇಳಿದರು. ಇದಕ್ಕೆ ಸಚಿವರು ಕುಡಿಯುವ ನೀರಿನ ಘಟಕಗಳ ದುರಸ್ತಿಯ ಹೊಣೆಯನ್ನು ಗ್ರಾಮ ಪಂಚಾಯ್ತಿಗಳಿಗೆ ನೀಡಲಾಗಿದ್ದು, ಪಿಡಿಓ ಅಧಿಕಾರಿಗಳಿಗೆ ದುರಸ್ತಿ ಮಾಡಿಸುವಂತೆ ಸೂಚಿಸುವುದಾಗಿ ತಿಳಿಸಿದರು.

ಫೋನ್‌ ಇನ್ ಕಾರ್ಯಕ್ರಮದ ಕೊನೆಯಲ್ಲಿ ಗ್ರಾಮಪಂಚಾಯ್ತಿಗಳು ಕೊರೊನಾ ವಿರುದ್ಧದ ಹೋರಾಟದಲ್ಲಿ ಯಶಸ್ವಿಯಾಗಿವೆ ಎಂದು ಹೇಳಿದರು. ಅಂಗನವಾಡಿ ಕಾರ್ಯಕರ್ತೆಯರು, ನರ್ಸ್‌ಗಳು, ಆಶಾ ಕಾರ್ಯಕರ್ತೆಯರು ಶ್ರಮವಹಿಸಿ ದುಡಿಯುತ್ತಿದ್ದಾರೆ ಎಂದು ಈಶ್ವರಪ್ಪ ಹೇಳಿದರು.

* ಲಕ್ಷ್ಮಿಪತಿ, ಉಪನ್ಯಾಸಕ, ಅರೇಹಳ್ಳಿ
ಅರೇಹಳ್ಳಿ ಕೆರೆಯನ್ನು ಅಭಿವೃದ್ಧಿಪಡಿಸಲು ಲಕ್ಷ್ಮಿಪತಿ ಸಚಿವರಲ್ಲಿ ಕೋರಿದರು. ಸಂಬಂಧಪಟ್ಟವರ ಗಮನಕ್ಕೆ ತಂದು ಸಮಸ್ಯೆ ಪರಿಹರಿಸಿರುವುದಾಗಿ ಭರವಸೆ ನೀಡಿದರು.

* ಮಂಜುನಾಥ್, ಶ್ರೀನಿವಾಸಪುರ, ಕೋಲಾರ
ಕಳೆದ 9 ತಿಂಗಳಿಂದ ವೇತನ ಬಿಡುಗಡೆಯಾಗಿಲ್ಲ ಎಂದು ಸಚಿವರಲ್ಲಿ ಮನವಿ ಮಾಡಿದರು. ನಾನು ಭಾನುವಾರ ಕೋಲಾರಕ್ಕೆ ಬರಲಿದ್ದು ನೀವು ಬನ್ನಿ ಸಮಸ್ಯೆ ಬಗೆಹರಿಸಿಕೊಡುತ್ತೇನೆ ಎಂದು ಸಚಿವರು ಹೇಳಿದರು.

* ನಜು, ದಾವಣಗೆರೆ
ನರೇಗದಲ್ಲಿ ಗುತ್ತಿಗೆ ನೌಕರರನ್ನು ಮುಂದವರೆಸುವುದಿಲ್ಲವೇ ಎಂದು ಸಚಿವರನ್ನು ಕೇಳಿದರು. ಗುತ್ತಿಗೆ ನೌಕರರನ್ನು ಮುಂದುವರೆಸುವುದಿಲ್ಲ ಎಂದರು.

*ದೊಡ್ಡ ಬೊರಯ್ಯ, ಕೂಡ್ಲಿಗಿ
ನರೇಗಾದಲ್ಲಿ ಕೆಲಸ ಆರಂಭವಾಗಿಲ್ಲ ಎಂದು ಕೇಳಿದರು. ಈಗಾಗಲೇ ಎಲ್ಲಾ ಗ್ರಾಮಪಂಚಾಯ್ತಿಗಳಲ್ಲಿ ನರೇಗಾ ಕೆಲಸ ಮಾಡಿಸಲು ಸೂಚಿಸಲಾಗಿದೆ ಎಂದು ಸಚಿವರು ಹೇಳಿದರು.

*ನಾ.ಲೆ.ಕೃಷ್ಣ, ಮಂಡ್ಯ
ಕೊರೊನಾ ಸೋಂಕಿನ ಬಗ್ಗೆ ನಮ್ಮ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ ಎಂಬ ಸಮಸ್ಯೆಯನ್ನು ಸಚಿವರ ಮುಂದಿಟ್ಟರು. ಸ್ಥಳೀಯ ಪಿಡಿಓ ಗಮನಕ್ಕೆ ತರುವುದಾಗಿ ಈಶ್ವರಪ್ಪ ಹೇಳಿದರು.

ಬಸವರಾಜು, ಗುಲ್ಬರ್ಗಾ
ನಮ್ಮ ಊರಿನಲ್ಲಿ ಕುಡಿಯುವ ನೀರಿನ ಟ್ಯಾಂಕ್‌ ಇಲ್ಲದೇ ಸಮಸ್ಯೆಯಾಗಿದೆ. ದಯಾಮಾಡಿ ಟ್ಯಾಂಕ್ ನಿರ್ಮಿಸಿಕೊಡಿ ಎಂದು ಮನವಿ ಮಾಡಿದರು. ಇದಕ್ಕೆ ಸಚಿವರು ಟ್ಯಾಂಕ್ ನಿರ್ಮಿಸುವ ಭರವಸೆ ನೀಡಿದರು

ಶಿರಸಿ, ದಯಾನಂದ್ ಕಾಮತ್‌
ನಮ್ಮ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗಿದ್ದು ಬೋರ್ವೆಲ್‌ ಹಾಕಿಸಿಕೊಡಿ ಎಂದರು. ಈಗಾಗಲೇ ಸರ್ಕಾರ ಕುಡಿಯುವ ನೀರಿಗಾಗಿ ಪ್ರತಿ ತಾಲ್ಲೂಕಿಗೆ ಒಂದು ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದು ವ್ಯವಸ್ಥೆ ಮಾಡುವುದಾಗಿ ಸಚಿವರು ಹೇಳಿದರು.
ಬೋರ್‌ವೆಲ್‌ ವ್ಯವಸ್ಥೆ ಇಲ್ಲ.

ಸತೀಶ್‌, ಜಗಳೂರು
ನರೇಗದಲ್ಲಿ ನಕಲಿ ಜಾಬ್‌ ಕಾರ್ಡ್‌ ಹಾವಳಿ ಹೆಚ್ಚಾಗಿದ್ದು ಅಮಾಯಕರಿಗೆ ತೊಂದರೆಯಾಗಿದೆ. ಮಧ್ಯವರ್ತಿಗಳು ಮತ್ತು ಎಂಜಿನಿಯರ್‌ಗಳು ಲೂಟಿ ಮಾಡುತ್ತಿದ್ದಾರೆ ಎಂದರೆ. ನೀವು ದಾಖಲೆ ನೀಡಿದರೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುವುದಾಗಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT