ಶುಕ್ರವಾರ, ಜೂನ್ 5, 2020
27 °C

ಕೊಪ್ಪಳ| ಜಮೀನಿನಲ್ಲೇ ಉಳಿದ ಕನಕಾಂಬರ

ಸಿದ್ದನಗೌಡ ಪಾಟೀಲ Updated:

ಅಕ್ಷರ ಗಾತ್ರ : | |

ಕೊಪ್ಪಳ: ತಾಲ್ಲೂಕಿನ ಹನುಮನಹಟ್ಟಿಯಲ್ಲಿ 60 ಎಕರೆಯಲ್ಲಿ 50ಕ್ಕೂ ಹೆಚ್ಚು ರೈತರು ಕನಕಾಂಬರ ಬೆಳೆದಿದ್ದಾರೆ. ಮಾರುಕಟ್ಟೆಯಿಲ್ಲದೇ ಹೂವುಗಳ ಗಿಡದಲ್ಲೇ ಬಾಡುತ್ತಿವೆ.


ಕೊಪ್ಪಳ ತಾಲ್ಲೂಕಿನ ಇರಕಲ್ಲಗಡಾ ಹೋಬಳಿಯ
ಹನಮನಟ್ಟಿಯ ರೈತ ಪರಮೇಶ್ವರ ಗೌಡ ಅವರು
ತಮ್ಮ ಜಮೀನಿನಲ್ಲಿ ಬೆಳೆದ ಕನಕಾಂಬರವನ್ನು
ಮಾರುಕಟ್ಟೆಗೆ ಸಾಗಿಸದೇ ಹಾಗೆ ಬಿಟ್ಟಿದ್ದಾರೆ

ಎರಡು ತಿಂಗಳಿನಿಂದ ಹೂವು ಕೊಳ್ಳುವವರು ಇಲ್ಲ.  ಹೂವುಗಳು ಗಿಡದಲ್ಲಿಯೇ ಅರಳಿ ಭೂಮಿ ಪಾಲಾಗುತ್ತಿವೆ.

‘ನಿತ್ಯ 6 ಕೆ.ಜಿ.ಯಷ್ಟು ಹೂವು ಬಿಡಿಸಿ ಪ್ರತಿ ಕೆ.ಜಿ ಗೆ ₹250ಕ್ಕೆ ಮಾರುತ್ತಿದ್ದೇವು. 1 ಕೆ.ಜಿ ಹೂವು ಬಿಡಿಸಲು ₹ 100 ಕೂಲಿ ನೀಡುತ್ತಿದ್ದೆವು. ಈಗಿನ ಸ್ಥಿತಿಯಲ್ಲಿ ನಮಗಷ್ಟೇ ಅಲ್ಲ, ಕೂಲಿಯವರಿಗೂ ಸಂಕಷ್ಟ ಎದುರಾಗಗಿದೆ’ ಎನ್ನುತ್ತಾರೆ ಈ ರೈತರು.

'ಒಂದು ಎಕರೆಯಲ್ಲಿ ಹೂವು  ಬೆಳೆದಿದ್ದೇನೆ. ₹ 1 ಲಕ್ಷ ಆದಾಯ ನಿರೀಕ್ಷಿಸಿದ್ದೆ. ಈಗ ಗ್ರಾಹಕರಿಲ್ಲದೆ ಹೊಲದಲ್ಲೇ ಬಿಟ್ಟಿದ್ದೇನೆ' ಎನ್ನುತ್ತಾರೆ ರೈತ ಪರಮೇಶ್ವರಗೌಡ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು