ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿಭಟಿಸಲು ಸಜ್ಜಾಗಿ ಬಂದಿದ್ದೆವು, ಎಲ್ಲ ವೇಸ್ಟ್ ಆಯಿತು: ಐವನ್ ಡಿಸೋಜ

Last Updated 18 ಫೆಬ್ರುವರಿ 2020, 6:23 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯಪಾಲರ ಭಾಷಣದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿಷಯ ಪ್ರಸ್ತಾಪವಾದರೆ ಪ್ರತಿಭಟನೆ ನಡೆಸಲು ಸಜ್ಜಾಗಿ ಬಂದಿದ್ದ ಕಾಂಗ್ರೆಸ್‌ ಶಾಸಕರಿಗೆ ನಿರಾಸೆ ಕಾದಿತ್ತು. ರಾಜ್ಯಪಾಲರ ಭಾಷಣದಲ್ಲಿ ಸಿಎಎ ಬಗ್ಗೆ ಒಂದೇ ಒಂದು ಸಾಲೂ ಇರಲಿಲ್ಲ. ಕಾಂಗ್ರೆಸ್‌ನ ವಿಧಾನಪರಿಷತ್‌ ಸದಸ್ಯ ಐವನ್‌ ಡಿಸೋಜಾ ಅವರು ವಿಧಾನಸಭೆಯೊಳಗೆ ಘೋಷಣಾ ಭಿತ್ತಿ ಪತ್ರಗಳನ್ನು ಒಯ್ದಿದ್ದರು. ರಾಜ್ಯಪಾಲರ ಭಾಷಣ ಮುಗಿದ ಬಳಿಕ ಹೊರಬಂದ ಐವನ್‌, ‘ನಾವು ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡಬೇಕು ಎಂದು ಸಜ್ಜಾಗಿ ಬಂದಿದ್ದೆವು, ಆಗಲಿಲ್ಲ ಎಲ್ಲ ವೇಸ್ಟ್‌ ಆಯಿತು’ ಎಂದು ಸುದ್ದಿಗಾರರಿಗೆ ಹೇಳಿದರು.

ಕಮಿಷನರ್‌ಗೆ ಅಡ್ಡಗಟ್ಟಿದ ಮಾರ್ಷಲ್‌: ರಾಜ್ಯಪಾಲ ವಜುಭಾಯಿ ವಾಲಾ ಅವರು ಬೆಳಿಗ್ಗೆ 11 ಕ್ಕೆ ವಿಧಾನಸಭೆ ಮೊಗಸಾಲೆಯಿಂದ ಸಭಾಂಗಣದೊಳಗೆ ಪ್ರವೇಶಿಸಿದರು. ಅವರ ಹಿಂದೆಯೇ ಬೆಂಗಳೂರು ಪೊಲೀಸ್‌ ಆಯುಕ್ತ ಭಾಸ್ಕರ್‌ ರಾವ್‌ ಅವರು ಮೊಗಸಾಲೆಯೊಳಗೆ ಪ್ರವೇಶಿಸಲು ಬಂದಾಗ ಮಾರ್ಷಲ್‌ಗಳು ತಡೆದರು. ಅವರು ಸಮವಸ್ತ್ರದಲ್ಲಿ ಬಂದ ಕಾರಣಕ್ಕೆ ಪ್ರವೇಶ ನಿರಾಕರಿಸಲಾಯಿತು. ಇದರಿಂದ ಆಯುಕ್ತರು ತಬ್ಬಿಬ್ಬಾದರು. ಖಾಕಿ ಸಮವಸ್ತ್ರದಲ್ಲಿ ಬರುವಂತೆ ಇಲ್ಲ ಎಂಬುದನ್ನು ಅವರಿಗೆ ತಿಳಿಸಲಾಯಿತು. ಇದಾದ ಒಂದೆರಡು ನಿಮಿಷಗಳಲ್ಲೇ ಅವರನ್ನು ಮೊಗಸಾಲೆಯೊಳಗೆ ಬಿಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT