ಗುರುವಾರ , ಜನವರಿ 23, 2020
27 °C

ಹೊರಗಿನವರು ಹೇಳಿಕೆ ನೀಡುವಂತಿಲ್ಲ: ಬಳ್ಳಾರಿ ಎಸ್ಪಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಳ್ಳಾರಿ: ಶಾಸಕ ಜಿ.ಸೋಮಶೇಖರ ರೆಡ್ಡಿ ಅವರ ಪ್ರಚೋದನಾಕಾರಿ ಭಾಷಣಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ಹೊರಗಿನವರು ಬಂದು ಹೇಳಿಕೆ ನೀಡುವಂತಿಲ್ಲ. ಹಂಪಿ ಉತ್ಸವದಿಂದಾಗಿ ತನಿಖೆ ವಿಳಂಬ ವಾಗಿತ್ತು. ಇನ್ಮುಂದೆ ಮುಂದುವರಿಸಲಾಗುವುದು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿ.ಕೆ.ಬಾಬಾ ತಿಳಿಸಿದ್ದಾರೆ.

‘ಜ.13 ರಂದು ನಗರದಲ್ಲಿರುವ ರೆಡ್ಡಿ ಅವರ ಮನೆ ಮುಂದೆ ಧರಣಿ ನಡೆಸುವುದಾಗಿ ಶಾಸಕ ಜಮೀರ್ ಅಹ್ಮದ್ ಅವರ ಕಡೆಯವರು 10ರಂದು ನಮ್ಮ ಕಚೇರಿಗೆ ಪತ್ರ ಸಲ್ಲಿಸಿದ್ದಾರೆ. ಅದಕ್ಕೆ ಸ್ವೀಕೃತಿ ಪತ್ರ ನೀಡಲಾಗಿದೆ. ಆದರೆ ಅದನ್ನೇ ಅನುಮತಿ ಎಂದು ಪರಿಗಣಿಸುವಂತಿಲ್ಲ’ ಎಂದು ಅವರು ಭಾನುವಾರ ಸ್ಪಷ್ಟಪಡಿಸಿದರು.

‘ರೆಡ್ಡಿ ಅವರ ಮನೆ ಸುತ್ತಮುತ್ತ ಸೋಮವಾರ ಬಿಗಿ ಭದ್ರತೆ ಕೈಗೊಳ್ಳ ಲಾಗುವುದು. ಜಮೀರ್‌ ಅವರು ಬಳ್ಳಾರಿಗೆ ಬರಲು ನಮ್ಮ ಅಡ್ಡಿಇಲ್ಲ. ಆದರೆ, ಅನುಮತಿ ಪಡೆಯದೇ ಧರಣಿ, ಪ್ರತಿಭಟನೆ ನಡೆಸಿದರೆ ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕ ಸ್ಥಳದಲ್ಲಿ ಮಾತ್ರ ಧರಣಿ ನಡೆಸಲು ಅವಕಾಶವಿದೆ. ಶಾಸಕರು ಖುದ್ದಾಗಿ ಬಂದು ಮನವಿ ಸಲ್ಲಿಸಿದರೆ ಅನುಮತಿ ನೀಡುವ ಕುರಿತು ಪರಿಶೀಲಿಸಲಾಗುವುದು’ ಎಂದೂ ಅವರು ಹೇಳಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು