ಭಾನುವಾರ, ಆಗಸ್ಟ್ 25, 2019
28 °C

ಸಂಪುಟ ರಚನೆ ಯಾವಾಗ ಎಂಬ ಪ್ರಶ್ನೆಗಳ ನಡುವೆಯೇ 6ರಂದು ಮೋದಿ–ಬಿಎಸ್‌ವೈ ಭೇಟಿ

Published:
Updated:

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ಅವರು ಇದೇ 5ರಂದು (ಸೋಮವಾರ)  ದೆಹಲಿ ಪ್ರವಾಸ ಕೈಗೊಂಡಿದ್ದು, 6 ರಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಲಿದ್ದಾರೆ. 

ಮಂಗಳವಾರ ಪ್ರಧಾನಿ ಮೋದಿ ಅವರನ್ನು ಭೇಟಿಯಾಗಲಿರುವ ಯಡಿಯೂರಪ್ಪ ಅವರು, ಅಂದೇ ಕರ್ನಾಟಕದ ಸಂಸದರು, ಕೇಂದ್ರ ಸಚಿವರ ಸಭೆ ನಡೆಸಲಿದ್ದಾರೆ. 7ರಂದು ಕೇಂದ್ರ ಸಚಿವರನ್ನು ಭೇಟಿಯಾಗಲಿದ್ದಾರೆ. 

ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ (ಜುಲೈ 26) ವಾರ ಕಳೆದರೂ ಇನ್ನೂ ಮಂತ್ರಿ ಮಂಡಲ ರಚನೆ ಮಾಡಿಲ್ಲ. ಹೀಗಾಗಿ ಬಿಜೆಪಿ ಸರ್ಕಾರ ಭಾರಿ ಟೀಕೆಗೆ ಗುರಿಯಾಗಿದೆ. ಹೀಗಿರುವಾಗಲೇ ಯಡಿಯೂರಪ್ಪ ಅವರು ದೆಹಲಿಗೆ ಪ್ರಯಾಣ ಬೆಳೆಸುತ್ತಿದ್ದು ಬಹುತೇಕ ಆ.6 ಅಥವಾ 7ರಂದು ಮಂತ್ರಿಗಳ ಪಟ್ಟಿ ಸಿದ್ಧವಾಗುವ ಸಾಧ್ಯತೆಗಳಿವೆ. 

ಅದರೊಂದಿಗೆ, ಮಂತ್ರಿ ಮಂಡಲ ರಚನೆ ಪ್ರಹಸನ ಇನ್ನೂ ಒಂದು ವಾರ ನಡೆಯುವ ಸಾಧ್ಯತೆಗಳು ನಿಚ್ಚಳವಾಗಿವೆ.

Post Comments (+)