ಶನಿವಾರ, ಅಕ್ಟೋಬರ್ 19, 2019
22 °C

ಹೈಕೋರ್ಟ್‌ಗೆ ನಾಲ್ವರು ಹೆಚ್ಚುವರಿ ನ್ಯಾಯಮೂರ್ತಿಗಳು

Published:
Updated:

ನವದೆಹಲಿ: ಕರ್ನಾಟಕ ಹೈಕೋರ್ಟ್‌ಗೆ ನಾಲ್ವರು ಹೆಚ್ಚುವರಿ ನ್ಯಾಯಮೂರ್ತಿಗಳನ್ನು ನೇಮಿಸಿ ಕೇಂದ್ರ ಸರ್ಕಾರ ಗುರುವಾರ ಆದೇಶ ಹೊರಡಿಸಿದೆ. ಎಂಟು ವಕೀಲರನ್ನು ಹೆಚ್ಚುವರಿ ನ್ಯಾಯಮೂರ್ತಿಗಳಾಗಿ ನೇಮಿಸಲು ಕೊಲಿಜಿಯಂ ಶಿಫಾರಸು ಮಾಡಿದ ಆರು ತಿಂಗಳ ಬಳಿಕ ಈ ನೇಮಕ ನಡೆದಿದೆ.

ಸಿಂಗಾಪುರಂ ರಾಘವಾಚಾರ್‌ ಕೃಷ್ಣ ಕುಮಾರ್‌, ಅಶೋಕ್‌ ಸುಭಾಶ್ಚಂದ್ರ ಕಿಂಗೈ, ಗೋವಿಂದರಾಜ್‌ ಸೂರಜ್‌ ಮತ್ತು ಸಚಿನ್‌ ಶಂಕರ್‌ ಮಂಗಡಂ ಅವರನ್ನು ಎರಡು ವರ್ಷ ಅವಧಿಗೆ ಹೆಚ್ಚುವರಿ ನ್ಯಾಯಮೂರ್ತಿಗಳಾಗಿ ನೇಮಿಸಲಾಗಿದೆ.

Post Comments (+)