ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ Live | ಚಾರ್ಮಾಡಿ ಘಾಟಿಯಲ್ಲಿ ಗುಡ್ಡದ ಮಣ್ಣು ಕುಸಿದು ಸಂಚಾರಕ್ಕೆ ಅಡ್ಡಿ

Last Updated 7 ಆಗಸ್ಟ್ 2019, 5:44 IST
ಅಕ್ಷರ ಗಾತ್ರ

ರಾಜ್ಯದ ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಮುಂಗಾರು ಚುರುಕಾಗಿದೆ. ಮಹಾರಾಷ್ಟ್ರದಲ್ಲಿರುವಕೃಷ್ಣಾ ನದಿಯ ಜಲಾಶಯಗಳಿಂದ ಭಾರೀ ಪ್ರಮಾಣದಲ್ಲಿ ನೀರು ಹೊರಬಿಡುತ್ತಿರುವುದರಿಂದ ಉತ್ತರ ಕರ್ನಾಟಕದ ಹಲವೆಡೆಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಮಳೆ ಮತ್ತು ಪ್ರವಾಹಕ್ಕೆ ಸಂಬಂಧಿಸಿದ ತಾಜಾ ಅಪ್‌ಡೇಟ್‌ ಇಲ್ಲಿ ಸಿಗಲಿದೆ.


08.20–ಚಿಕ್ಕಮಗಳೂರು: ಚಾರ್ಮಾಡಿ ಘಾಟಿ ಮಾರ್ಗದಲ್ಲಿ ಮಂಗಳವಾರ ರಾತ್ರಿ 8 ಗಂಟೆ ಸುಮಾರಿಗೆ ಕೆಲವು ಕಡೆ ಗುಡ್ಡದ ಮಣ್ಣುಕುಸಿದಿದ್ದು, ಸಂಚಾರಕ್ಕೆ ಅಡಚಣೆಯಾಗಿದೆ. 10ನೇ ತಿರುವಿನ ಬಳಿ ಮರವೊಂದು ಕಾರಿನ ಮೇಲೆ ಬಿದ್ದಿದೆ. ಕಾರು ಜಖಂಗೊಂಡಿದೆ, ಕಾರಿನಲ್ಲಿದ್ದವರು ಪಾರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸಂಚಾರಕ್ಕೆ ತಡೆ: ಚಾರ್ಮಾಡಿ ಘಾಟಿ ಮಾರ್ಗದಲ್ಲಿ ವಾಹನಗಳ ಸಂಚಾರ ಬಂದ್‌ ಮಾಡಲಾಗಿದೆ. ಈ ಮಾರ್ಗದಲ್ಲಿ ವಾಹನಗಳ ಸಂಚರಿಸದಂತೆ ಕೊಟ್ಟಿಗೆಹಾರದಲ್ಲಿ ಮಂಗಳವಾರ ರಾತ್ರಿ 8 ಗಂಟೆಯಿಂದ ನಿರ್ಬಂಧಿಸಲಾಗಿದೆ.

ಬಾಳೆಹೊನ್ನೂರು–ಕಳಸ ಮಾರ್ಗದ ಮಾಗುಂಡಿ ಗ್ರಾಮದ ಬಳಿ ಕಾರಿನ ಮೇಲೆ ಮರ ಬಿದ್ದು ಚಾಲಕ ಸಹಿತ ನಾಲ್ವರು ಗಾಯಗೊಂಡಿದ್ದಾರೆ.ಮಂಗಳವಾರ ರಾತ್ರಿ 9 ಗಂಟೆ ಹೊತ್ತಿನಲ್ಲಿ ಈ ಅವಘಡ ಸಂಭವಿಸಿದೆ. ಗಾಯಾಗಳುಗಳನ್ನು ಬಾಳೆಹೊನ್ನೂರು ಆಸ್ಪತ್ರೆಗೆ ದಾಖಲಿಸಲಾಗಿದೆ.

07.00–ಭಾರಿ ಮಳೆ; ಬೆಳಗಾವಿಯಆರ್‌ಸಿಯು ಮುಖ್ಯ ಕಚೇರಿಗೆ ರಜೆ

ಭಾರಿ ಮಳೆ ಸುರಿಯುತ್ತಿರುವ ಕಾರಣ ಇಲ್ಲಿನ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಮುಖ್ಯ ಆವರಣದಲ್ಲಿರುವ ಉಪನ್ಯಾಸಕರಿಗೆ, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಿಗೆ ಬುಧವಾರ ರಜೆ ಘೋಷಿಸಲಾಗಿದೆ ಎಂದು ಕುಲಸಚಿವ ಬಸವರಾಜ ಪದ್ಮಸಾಲಿ ತಿಳಿಸಿದ್ದಾರೆ.

ರಾಮದುರ್ಗ ತಾಲ್ಲೂಕು ಹೊರತುಪಡಿಸಿದಂತೆ ಬೆಳಗಾವಿಜಿಲ್ಲಾ ವ್ಯಾಪ್ತಿಯಲ್ಲಿರುವ ಎಲ್ಲ ಸರ್ಕಾರಿ, ಅನುದಾನಿತ, ಅನುದಾನ ರಹಿತ ಪದವಿಪೂರ್ವ ಹಾಗೂ ಪದವಿ ಕಾಲೇಜುಗಳಿಗೆ ಜಿಲ್ಲಾಧಿಕಾರಿ ಎಸ್‌.ಬಿ. ಬೊಮ್ಮನಹಳ್ಳಿ ಅವರು ಬುಧವಾರ ರಜೆ ಘೋಷಿಸಿದ್ದಾರೆ.

ಭಾರಿ ಮಳೆ ಸುರಿಯುತ್ತಿರುವ ಕಾರಣ, ವಿದ್ಯಾರ್ಥಿಗಳ ಸುರಕ್ಷತಾ ದೃಷ್ಟಿಯಿಂದ ಈ ಕ್ರಮಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಈಗಾಗಲೇ ಶಾಲೆಗಳಿಗೆ ಬುಧವಾರದವರೆಗೆ ರಜೆ ಘೋಷಿಸಲಾಗಿದ್ದನ್ನು ಸ್ಮರಿಸಬಹುದು.

05.00–ಚಿಕ್ಕಮಗಳೂರು: ಮಳೆಯ ಆರ್ಭಟಕ್ಕೆ ಜಿಲ್ಲೆಯ ತರೀಕೆರೆ ತಾಲ್ಲೂಕಿನ ಕಲ್ಲತ್ತಿಗಿರಿ ಜಲಪಾತ ಭೋರ್ಗರೆದು ಧುಮ್ಮಿಕ್ಕುತ್ತಿದೆ, ಜಲಪಾತದ ಅಂಗಳದ ವೀರಭದ್ರೇಶ್ವರ ಸ್ವಾಮಿ ದೇಗುಲದಲ್ಲಿ ಸಿಲುಕಿಕೊಂಡಿದ್ದ ಪ್ರವಾಸಿಗರನ್ನು ಪೊಲೀಸರು, ಸ್ಥಳೀಯರು ರಕ್ಷಿಸಿದ್ದಾರೆ.

#Rain #KalhattagiriFalls #Chikkamagaluru

A post shared by Prajavani (@prajaavaani) on

04.20–ಕಲಬುರ್ಗಿ: ಭೀಮಾ ನದಿಗೆ ಮಹಾರಾಷ್ಟ್ರದ ಉಜನಿ ಹಾಗೂ ವೀರಾ ಅಣೆಕಟ್ಟೆಯಿಂದ ಒಟ್ಟು 2.25 ಲಕ್ಷ ಕ್ಯುಸೆಕ್ ನೀರನ್ನು ಹೊರಬಿಡಲಾಗಿದ್ದು, ನೀರು ಪ್ರಸ್ತುತ ‌ಪಂಢರಾಪುರ ತಲುಪಿದೆ. ರಾತ್ರಿ ವೇಳೆಗೆ ಕಲಬುರ್ಗಿ ಜಿಲ್ಲೆಯ ‌ಗಡಿ ತಲುಪಲಿದೆ.

03.45–ಬೆಳಗಾವಿ: ಮಲಪ್ರಭಾ ಉಗಮಸ್ಥಳವಾಗಿರುವ ಖಾನಾಪುರ ತಾಲ್ಲೂಕಿನ ಕಣಕುಂಬಿಯಲ್ಲಿ ಭಾರಿ ಪ್ರಮಾಣದಲ್ಲಿ ಮಳೆ ಸುರಿಯುತ್ತಿದೆ. ಎಡಬಿಡದೆ ಸುರಿಯುತ್ತಿದ್ದು, ದಿನದ 24 ಗಂಟೆಗಳಲ್ಲಿ 335 ಮಿ.ಮೀ ಮಳೆಯಾಗಿದೆ.

ಖಾನಾಪುರ ಅರಣ್ಯದಲ್ಲಿ ಉಕ್ಕಿ ಹರಿಯುತ್ತಿರುವ ಮಲಪ್ರಭಾ ನದಿ
ಖಾನಾಪುರ ಅರಣ್ಯದಲ್ಲಿ ಉಕ್ಕಿ ಹರಿಯುತ್ತಿರುವ ಮಲಪ್ರಭಾ ನದಿ

03.15–ತುಂಗಾನದಿಯ ಜಲಾನ­ಯನ ಪ್ರದೇಶವಾದ ತೀರ್ಥಹಳ್ಳಿ, ಶೃಂಗೇರಿ ಭಾಗದಲ್ಲಿ ಉತ್ತಮ ಮಳೆ­ಯಾ­ಗುತ್ತಿದ್ದು, ಇಲ್ಲಿಗೆ ಸಮೀಪದ ಗಾಜನೂರಿನಲ್ಲಿರುವ ತುಂಗಾ ಜಲಾಶಯಕ್ಕೆ ಒಳಹರಿವು ಮಂಗಳವಾರ ಹೆಚ್ಚಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಅಣೆಕಟ್ಟೆಯ ಇಪ್ಪತ್ತು ಕ್ರಸ್ಟ್‌ಗೇಟ್‌ಗಳನ್ನು ತೆರೆದು ಹೆಚ್ಚುವರಿ ನೀರನ್ನು ನದಿಗೆ ಹರಿಸಲಾಗುತ್ತಿದೆ.

03.00–ಹುಬ್ಬಳ್ಳಿ/ಕಲಬುರ್ಗಿ:ಉತ್ತರ ಕರ್ನಾಟಕ ಭಾಗದಲ್ಲಿ ವ್ಯಾಪಕ ಮಳೆ ಸುರಿಯುತ್ತಿರುವುದರಿಂದಈಶಾನ್ಯ ಸಾರಿಗೆ ಸಂಸ್ಥೆ ಮತ್ತುವಾಯವ್ಯ ರಸ್ತೆ ಸಾರಿಗೆಸಂಸ್ಥೆ‌ ವ್ಯಾಪ್ತಿಯ ಹಲವು ಮಾರ್ಗಗಳ ಬಸ್ ಸಂಚಾರ ಸ್ಥಗಿತಗೊಂಡಿದೆ.

02.50–ಕಾರವಾರ ಜಿಲ್ಲೆಯಲ್ಲಿ ಮಂಗಳವಾರವೂ ಭಾರಿ ಮಳೆ ಬೀಳುತ್ತಿದ‌್ದು, ನದಿಗಳು ಉಕ್ಕಿ ಹರಿಯುತ್ತಿವೆ. ಕದ್ರಾ ಅಣೆಕಟ್ಟೆಯಿಂದ ಕಾಳಿ ನದಿಗೆ ನಿರಂತರವಾಗಿ ನೀರು ಹರಿಸಲಾಗುತ್ತಿದೆ. ಇದರಿಂದ ಕೆಳಭಾಗದ ಹಳ್ಳಿಗಳೆಲ್ಲ ಮುಳುಗಡೆಯಾಗಿವೆ. ಮಲ್ಲಾಪುರ, ವಿರ್ಜೆ, ಖಾರ್ಗೆಜೂಗ, ಉಂಬಳಿಜೂಗ ಸೇರಿದಂತೆ ಹತ್ತಾರು ಗ್ರಾಮಗಳಿಂದ ಜನರನ್ನು ತೆರವು ಮಾಡಲಾಗಿದೆ.

02.40–ಬೆಳಗಾವಿ: ಜಲಾಶಯಗಳಿಂದ ಭಾರಿ ಪ್ರಮಾಣದಲ್ಲಿ ನೀರು ಬಿಡುಗಡೆ

02.15– ಧಾರವಾಡ:ಉಕ್ಕಿಹರಿದ ಹುಲಿಕೆರೆ: ಮುನ್ನೆಚ್ಚರಿಕೆ ಕ್ರಮವಾಗಿ 150 ಕುಟುಂಬಗಳನ್ನು ಸ್ಥಳಾಂತರ ಮಾಡಲಾಗಿದೆ.


12.56–ಹುಬ್ಬಳ್ಳಿಯಲ್ಲಿ ಮಳೆ ಸಂತ್ರಸ್ತರ ಸಹಾಯಕ್ಕೆ,ವಾಟ್ಸ್ ಆ್ಯಪ್ ನಂ: 9480230962,ಟೋಲ್ ಫ್ರೀ ದೂರವಾಣಿ: 1077​

12.50–ಮಂಗಳೂರಿನ ಉಳ್ಳಾಲ ಸಮೀಪದ ಸೋಮೇಶ್ವರ ಬೀಚ್ ಬಳಿ ಸೋಮವಾರ ಸಂಜೆಯಿಂದ ಕಡಲ್ಕೊರೆತ ಹೆಚ್ಚಿದ್ದುಮಂಗಳವಾರ ಬೆಳಿಗ್ಗೆಯಿಂದ ಬೃಹತ್ ಗಾತ್ರದ ಅಲೆಗಳು ಬಂದು ದಡಕ್ಕೆ ಅಪ್ಪಳಿಸುತ್ತಿವೆ. ಬೀಚ್ ಪಕ್ಕದ ರಸ್ತೆಯ ಅರ್ಧ ಭಾಗ ಕಡಲ್ಕೊರೆತದಿಂದ ಸಮುದ್ರಪಾಲಾಗಿದೆ.

12.40–ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಲ್ಲಿತುಂಗಾ ನದಿ ಮೈದುಂಬಿ ಹರಿಯುತ್ತಿದೆ.

ತುಂಗಾ ನದಿ
ತುಂಗಾ ನದಿ

12.32–ಬೆಳಗಾವಿಜಿಲ್ಲೆಯ ಅಥಣಿ ತಾಲ್ಲೂಕಿನ ತೀರ್ಥ ಗ್ರಾಮದಲ್ಲಿ ನೀರಿನ ಸೆಳೆತಕ್ಕೆ ಸಿಲುಕಿದ್ದ ಆಟೊ ರಿಕ್ಷಾ ಹಾಗೂ ಚಾಲಕನನ್ನು ರಕ್ಷಣೆ ಮಾಡಗಿದೆ.

12.14–ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಹರಿಯುತ್ತಿರುವ ಪುಣ್ಯ ನದಿ ಕುಮಾರಧಾರ ನೆರೆ ನೀರಿನಿಂದ ತುಂಬಿ ಹರಿಯುತಿದ್ದು ಭಕ್ತರು ತೀರ್ಥ ಸ್ನಾನ ನೆರವೇರಿಸುವ ಸ್ನಾನ ಘಟ್ಟ ಸಂಪೂರ್ಣ ನೆರೆಯಿಂದ ಮಂಗಳವಾರ ಮುಳುಗಡೆಗೊಂಡಿದೆ.

12.00–ಹುಬ್ಬಳ್ಳಿ: ಸತತವಾಗಿ ಸುರಿಯುತ್ತಿರುವ ಮಳೆಗೆ ನಗರದ ಬಹುತೇಕ ರಸ್ತೆಗಳು ಗುಂಡಿಮಯವಾಗಿವೆ. ಕೆಲವೆಡೆ ಮನೆಗಳು ಭಾಗಶಃ ಬಿದ್ದಿವೆ.

11.53–ಶಂಗೇರಿಯಲ್ಲಿ ದೇಗುಲ ಸುತ್ತಮುತ್ತಲಿನ ಪ್ರದೇಶಗಳು ಜಲಾವೃತವಾಗಿವೆ.

11.44– ಪುಣೆ–ಬೆಂಗಳೂರು ರಸ್ತೆ ಬಂದ್‌:ಮಹಾರಾಷ್ಟ್ರ ಹಾಘೂ ಉತ್ತರ ಕರ್ನಾಟಕ ಬಾಗದಲ್ಲಿ ವ್ಯಾಪಕವಾಘಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಪುಣೆ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯನ್ನು ಬಂದ್ ಮಾಡಲಾಗಿದೆ.

ಇದರಿಂದ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯುಮುಂಬೈ, ಪುಣೆ ಮತ್ತು ಶಿರಡಿ ಬಸ್‌ಗಳನ್ನು ರದ್ದುಪಡಿಸಿದೆ.

11.20– ಮುಂಬೈ, ಪುಣೆ ಮತ್ತು ಶಿರಡಿ ಬಸ್‌ಗಳನ್ನು ರದ್ದುಪಡಿಸಿದ ಕೆಎಸ್‌ಆರ್‌ಟಿಸಿ

11.05– ಉಡುಪಿಯ ಇಂದ್ರಾಳಿ ರೈಲು ನಿಲ್ದಾಣದಲ್ಲಿ ಮರವೊಂದು ನೇತ್ರಾವತಿ ಎಕ್ಸ್‌ಪ್ರೆಸ್‌ರೈಲಿನ ಮೇಲೆ ಬಿದ್ದಿದೆ. ಬೆಳಿಗ್ಗೆ ರೈಲು ಮಂಗಳೂರು ಮಾರ್ಗವಾಗಿ ತೆರಳುತ್ತಿದ್ದಾಗ ಮರ ಬಿದ್ದಿದ್ದು ಸಿಬ್ಬಂದಿ ತೆರವು ಗೊಳಿಸಿದ್ದಾರೆ. ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ‌.

10.51– ಉಡುಪಿಜಿಲ್ಲೆಯಲ್ಲಿ ಬಿರುಗಾಳಿ ಸಹಿತ ಬಿರುಸಾಗಿ ಮಳೆ ಸುರಿಯುತ್ತಿದ್ದು ನಗರದ ಹಲವು ಪ್ರದೇಶಗಳು ಜಲಾವೃತಗೊಂಡಿವೆ. ರಾತ್ರಿಯಿಂದ ಜಿಟಿಜಿಟಿ ಮಳೆ ಸುರಿಯುತ್ತಿದ್ದು ಬೆಳಿಗ್ಗೆಯೂ ಮುಂದುವರಿದಿದೆ. ಗಾಳಿ ಮಳೆಗೆ ವಿದ್ಯುತ್ ಕಡಿತಗೊಳಿಸಲಾಗಿದೆ.

ಉಡುಪಿಜಿಲ್ಲೆಯಲ್ಲಿ ಬಿರುಗಾಳಿ ಸಹಿತ ಮಳೆ ಸುರಿಯುತ್ತಿದೆ.
ಉಡುಪಿಜಿಲ್ಲೆಯಲ್ಲಿ ಬಿರುಗಾಳಿ ಸಹಿತ ಮಳೆ ಸುರಿಯುತ್ತಿದೆ.

10.49–ಚಿಕ್ಕಮಗಳೂರು ಜಿಲ್ಲೆ, ಮೂಡಿಗೆರೆ ತಾಲ್ಲೂಕುಚಾರ್ಮಾಡಿ ಘಾಟಿಯ 7ನೆ ತಿರುವಿನಲ್ಲಿ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದಿದ್ದು ಸಂಚಾರಕ್ಕೆ ಅಡಚಣೆಯಾಗಿದೆ. ವಾಹನಗಳು ಸಾಲುಗಟ್ಟಿ ನಿಂತಿವೆ.

ಚಾರ್ಮಾಡಿ ಘಾಟಿಯ 7ನೆ ತಿರುವಿನಲ್ಲಿ ವಾಹನಗಳು ಸಾಲುಗಟ್ಟಿ ನಿಂತಿವೆ.
ಚಾರ್ಮಾಡಿ ಘಾಟಿಯ 7ನೆ ತಿರುವಿನಲ್ಲಿ ವಾಹನಗಳು ಸಾಲುಗಟ್ಟಿ ನಿಂತಿವೆ.

10.33– ಚಿಕ್ಕಮಗಳೂರು ಜಿಲ್ಲೆಚಾರ್ಮಾಡಿ ಘಾಟಿಯಲ್ಲಿ ಮಂಗಳವಾರ ಬೆಳಿಗ್ಗೆ ಗುಡ್ಡದ ಮಣ್ಣು ರಸ್ತೆಗೆ ಅಡ್ಡಲಾಗಿ ಬಿದ್ದಿದ್ದು ಸಂಚಾರಕ್ಕೆ ತೊಡಕಾಗಿದೆ.

ಚಾರ್ಮಾಡಿ ಘಾಟಿಯಲ್ಲಿ ಮಂಗಳವಾರ ಬೆಳಿಗ್ಗೆ ಗುಡ್ಡದ ಮಣ್ಣು ಕುಸಿದು ರಸ್ತೆಗೆ ಅಡ್ಡಲಾಗಿ ಬಿದ್ದಿದ್ದು ಸಂಚಾರಕ್ಕೆ ತೊಡಕಾಗಿದೆ.
ಚಾರ್ಮಾಡಿ ಘಾಟಿಯಲ್ಲಿ ಮಂಗಳವಾರ ಬೆಳಿಗ್ಗೆ ಗುಡ್ಡದ ಮಣ್ಣು ಕುಸಿದು ರಸ್ತೆಗೆ ಅಡ್ಡಲಾಗಿ ಬಿದ್ದಿದ್ದು ಸಂಚಾರಕ್ಕೆ ತೊಡಕಾಗಿದೆ.

10.30– ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆ ಮುಂದುವರಿದಿದ್ದು, ಹತ್ತಾರು ಹಳ್ಳಿಗಳು ಸಂಪೂರ್ಣ ಜಲಾವೃತವಾಗಿವೆ.ಕದ್ರಾ ಅಣೆಕಟ್ಟೆಯ 10 ಗೇಟ್ ಗಳಿಂದ ಕಾಳಿ ನದಿಗೆ ಸೋಮವಾರದಿಂದ ನಿರಂತರವಾಗಿ ನೀರು ಹರಿಯುತ್ತಿದೆ. ಅಂಕೋಲಾ ತಾಲ್ಲೂಕಿನ ಬೆಳಸೆಯಲ್ಲಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನೀರು ನಿಂತಿದೆ. ಇದರಿಂದ ವಾಹನ ಸಂಚಾರ ಅಸ್ತವ್ಯಸ್ತವಾಗಿದೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ದೋಣಿಗಳ ಮೂಲಕ ಜನರನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸಲಾಗುತ್ತಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ದೋಣಿಗಳ ಮೂಲಕ ಜನರನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT