ವಲ್ಲಿ ವಗ್ಗಗೆ ಕೊಂಕಣಿ ಸಾಹಿತ್ಯ ಪ್ರಶಸ್ತಿ

7

ವಲ್ಲಿ ವಗ್ಗಗೆ ಕೊಂಕಣಿ ಸಾಹಿತ್ಯ ಪ್ರಶಸ್ತಿ

Published:
Updated:
Deccan Herald

ಮೈಸೂರು: ಕೊಂಕಣಿ ಸಾಹಿತಿ, ಕನ್ನಡ ಕಥೆಗಾರ ಮೈಸೂರಿನ ವಲ್ಲಿ ವಗ್ಗ (ವಲೇರಿಯನ್‌ ಡಿಸೋಜಾ) ಅವರು ‘ದಾಯ್ಜಿ ದುಬೈ–2019’ ಕೊಂಕಣಿ ಸಾಹಿತ್ಯ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ದುಬೈನಲ್ಲಿರುವ ‘ದಾಯ್ಜಿ ದುಬೈ ಕೊಂಕಣಿ ಲೇಖಕರ ಸಂಘ’ ನೀಡುವ ಈ ಪ್ರಶಸ್ತಿಯು ₹ 75 ಸಾವಿರ ನಗದು ಮತ್ತು ಫಲಕ ಒಳಗೊಂಡಿದೆ. 2019ರ ಏ. 26ರಂದು ದುಬೈನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

ಇವರು ಕೊಂಕಣಿಯಲ್ಲಿ ಸಣ್ಣ ಕಥೆ, ಕವಿತೆ, ಲೇಖನ ಸೇರಿ 150 ಕೃತಿ ರಚಿಸಿದ್ದಾರೆ. ಕನ್ನಡದಲ್ಲಿ 40 ಸಣ್ಣ ಕಥೆ ಬರೆದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !