6 ಮಂದಿಗೆ ಕೊಂಕಣಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

7

6 ಮಂದಿಗೆ ಕೊಂಕಣಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

Published:
Updated:

ಮಂಗಳೂರು: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ 2018ನೇ ಸಾಲಿನ ಗೌರವ ಪ್ರಶಸ್ತಿ ಹಾಗೂ ಪುಸ್ತಕ ಬಹುಮಾನ ಪ್ರಕಟಿಸಲಾಗಿದೆ. ಗೌರವ ಪ್ರಶಸ್ತಿಗೆ ಜೆ.ಎಫ್.ಡಿಸೋಜ (ಸಾಹಿತ್ಯ), ಕೂಡ್ಲ ಆನಂದು ಮಧುಕರ್ ಶ್ಯಾನಭಾಗ್ (ಕಲೆ), ಡಾ.ವಸಂತ ಬಾಂದೇಕರ್ (ಜಾನಪದ) ಆಯ್ಕೆಯಾಗಿದ್ದಾರೆ.

ಪುಸ್ತಕ ಬಹುಮಾನಕ್ಕೆ ಲವಿ ಗಂಜಿಮಠ (ತಾರಾ ಲವೀನಾ ಫೆರ್ನಾಂಡಿಸ್) ಬರೆದ ‘ಚುಕ್‌ಲ್ಲಿಂ ಮೆಟಾಂ’ (ಕಾದಂಬರಿ), ರೋಶು ಬಜ್ಪೆ ಬರೆದ ‘ತೀಂತ್ ಜಾಲೆಂ ರಗತ್’ (ಕವನ ಸಂಕಲನ) ಹಾಗೂ ಜೆಯಲ್ ಮಂಜರಪಲ್ಕೆ ಬರೆದ ‘ಚಂದ್ರಮಾಚಿ ಖತಾಂ’ (ಸಣ್ಣಕತೆ) ಆಯ್ಕೆಯಾಗಿವೆ.

ಗೌರವ ಪ್ರಶಸ್ತಿ ತಲಾ ₹ 50 ಸಾವಿರ ಹಾಗೂ ಪುಸ್ತಕ ಬಹುಮಾನ ₹ 25 ಸಾವಿರ ನಗದು ಒಳಗೊಂಡಿದೆ ಎಂದು ಅಕಾಡೆಮಿಯ ಅಧ್ಯಕ್ಷ ಆರ್.ಪಿ.ನಾಯ್ಕ್ ಶನಿವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಮಾರ್ಚ್ 8,9 ಮತ್ತು 10ರಂದು ದಾಂಡೇಲಿ, ಜೊಯಿಡಾ ಹಾಗೂ ಹಳಿಯಾಳ ತಾಲ್ಲೂಕುಗಳಲ್ಲಿ ಸಾಹಿತ್ಯ ಅಕಾಡೆ
ಮಿಯ ಕಾರ್ಯಕ್ರಮಗಳು ನಡೆಯಲಿವೆ. 9 ಮತ್ತು 10ರಂದು ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !