ಕೊಪ್ಪಳ: ಮೂರು ಮಕ್ಕಳಿಗೆ ಜನ್ಮ ನೀಡಿದ ತಾಯಿ

7

ಕೊಪ್ಪಳ: ಮೂರು ಮಕ್ಕಳಿಗೆ ಜನ್ಮ ನೀಡಿದ ತಾಯಿ

Published:
Updated:

ಕೊಪ್ಪಳ: ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಮಂಗಳವಾರ ಸಹಜ ಹೆರಿಗೆಯಿಂದ ಮೂರು ಮಕ್ಕಳಿಗೆ ಮಹಿಳೆಯೊಬ್ಬರು ಜನ್ಮ ನೀಡಿದ್ದಾರೆ.

ಗಂಗಾವತಿ ತಾಲ್ಲೂಕಿನ ವಿಠ್ಠಲಾಪುರ ಗ್ರಾಮದ ನಿವಾಸಿ ರತ್ನಮ್ಮ ನಿರುಪಾದೆಪ್ಪ ತಾವರಗೇರಿ (27) ಅವರು ಎರಡು ಹೆಣ್ಣು, ಒಂದು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ ಮತ್ತು ಮಗು ಆರೋಗ್ಯದಿಂದ ಇದ್ದಾರೆ ಎಂದು ಆಸ್ಪತ್ರೆಯ ವೈದ್ಯ ಡಾ.ಲೋಕೇಶ ತಿಳಿಸಿದ್ದಾರೆ.  

ಮುಸಲಾಪುರ ಗ್ರಾಮ ತವರು ಮನೆಯಾಗಿದ್ದು, ವಿಠ್ಠಲಾಪುರ ಗಂಡನ ಮನೆ. ರತ್ನಮ್ಮ ಅವರಿಗೆ ಇದು ಎರಡನೇ ಹೆರಿಗೆ. ಮೊದಲ ಹೆರಿಗೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. 

ಈ ಕುರಿತು ಮಹಿಳೆ ಪತ್ರಿಕೆಯೊಂದಿಗೆ ಮಾತನಾಡಿ, 'ಅಲ್ಪ ಜಮೀನು ಇದೆ. ಕೂಲಿ ಮಾಡಿಕೊಂಡು ಉಪಜೀವನ ನಡೆಸುತ್ತೇವೆ. ಮೊದಲ ಹೆಣ್ಣು ಮಗು, ಈಗ ಎರಡು ಹೆಣ್ಣು ಮಕ್ಕಳು ಜನಿಸಿವೆ. ಸ್ವಲ್ಪ ಬೇಸರವೆನಿಸಿದರೂ ದೇವರು ಕೊಟ್ಟ ವರ ಎಂದು ಭಾವಿಸಿ ಶಕ್ತಿ ಮೀರಿ ದುಡಿದು ಮಕ್ಕಳನ್ನು ಸಾಕುತ್ತೇವೆ. ಅವರಿಗೆ ಉತ್ತಮ ಶಿಕ್ಷಣ ಕೊಡಿಸುವ ಕನಸು ಇದೆ' ಎಂದು ಹೇಳಿದರು.

ಡಾ.ಲೋಕೇಶ ಮಾತನಾಡಿ, 'ಅವಳಿ ಮಕ್ಕಳ ಜನನ ಸಾಮಾನ್ಯ. ಅಪರೂಪಕ್ಕೆ ಮೂರು ಅದಕ್ಕಿಂತ ಹೆಚ್ಚು ಮಕ್ಕಳು ಜನಿಸಿಸುತ್ತವೆ. ಈ ಸರ್ಕಾರಿ ಆಸ್ಪತ್ರೆ 10 ವರ್ಷದ ಹಿಂದೆ ಆರಂಭವಾದಗಿನಿಂದ ಎರಡನೇ ಬಾರಿಗೆ ಮೂರು ಮಕ್ಕಳು ಜನಿಸಿದ ಘಟನೆ ವರದಿಯಾಗಿವೆ' ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 10

  Happy
 • 0

  Amused
 • 1

  Sad
 • 0

  Frustrated
 • 2

  Angry

Comments:

0 comments

Write the first review for this !