ಶನಿವಾರ, ಜೂನ್ 19, 2021
22 °C

ಫೇಸ್‌ಬುಕ್‌ ಫಾಲೋವರ್ಸ್‌: ಶೋಭಾ ಕರಂದ್ಲಾಜೆ ಹಿಂದಿಕ್ಕಿದ ಲಕ್ಷ್ಮಿ ಹೆಬ್ಬಾಳಕರ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಅವರ ಫೇಸ್‌ಬುಕ್‌ ಖಾತೆಯ ಫಾಲೋವರ್ಸ್‌ ಸಂಖ್ಯೆ 2 ಲಕ್ಷಕ್ಕೆ ತಲುಪಿದೆ. ರಾಜ್ಯದ ಮಹಿಳಾ ರಾಜಕಾರಣಿಗಳ ಪೈಕಿ ಅತಿ ಹೆಚ್ಚು ಫಾಲೋವರ್ಸ್‌ ಹೊಂದಿದ್ದಾರೆ.

2017ರ ಏಪ್ರಿಲ್‌ನಲ್ಲಿ ಲಕ್ಷ್ಮಿ ಹೆಬ್ಬಾಳಕರ ಫೇಸ್ ಬುಕ್ ಖಾತೆ ತೆರೆದಿದ್ದರು. ಇದೀಗ ಅವರ ಫಾಲೋವರ್ಸ್‌ ಸಂಖ್ಯೆ 2 ಲಕ್ಷ ತಲುಪಿದೆ. ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ 1.83 ಲಕ್ಷ, ಸಂಸದೆ, ಚಿತ್ರನಟಿ ಸುಮಲತಾ ಅಂಬರೀಶ್ ಅವರಿಗೆ 1.72 ಲಕ್ಷ ಹಾಗೂ ಸಚಿವೆ ಶಶಿಕಲಾ ಜೊಲ್ಲೆ ಅವರಿಗೆ 71 ಸಾವಿರ ಫಾಲೋವರ್ಸ್ ಇದ್ದಾರೆ. 

ಲಕ್ಷ್ಮಿ ಹೆಬ್ಬಾಳಕರ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಕ್ರಿಯಾಶೀಲರಾಗಿದ್ದಾರೆ. ವಿವಿಧ ಜಾಲತಾಣಗಳ ಮೂಲಕ ತಮ್ಮ ಕ್ಷೇತ್ರದ ಜನರನ್ನು, ಅಭಿಮಾನಿಗಳನ್ನು ತಲುಪುತ್ತಾರೆ. ಫೇಸ್ ಬುಕ್ ಅಷ್ಟೇ ಅಲ್ಲದೆ, ಟ್ವಿಟರ್, ಇನ್‌ಸ್ಟಾ ಗ್ರಾಂ, ವಾಟ್ಸ್ಆ್ಯಪ್‌ ಗಳಲ್ಲಿ ಸಹ ಅವರು ನಿರಂತರ ಕ್ರಿಯಾಶೀಲರಾಗಿದ್ದಾರೆ. ಅವರ ಅಭಿಮಾನಿಗಳ ಹೆಸರಿನಲ್ಲಿ ಹಲವು ಫೇಸ್‌ಬುಕ್ ಗ್ರುಪ್‌ಗಳಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು