ಸೋಮವಾರ, ಮಾರ್ಚ್ 30, 2020
19 °C

ಲಲಿತಕಲಾ ಅಕಾಡೆಮಿ ವಾರ್ಷಿಕ ಪ್ರಶಸ್ತಿ ಪ್ರಕಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕರ್ನಾಟಕ ಲಲಿತಕಲಾ ಅಕಾಡೆಮಿಯು ಮೂವರಿಗೆ ಗೌರವ ಪ್ರಶಸ್ತಿ ಪ್ರಕಟಿಸಿದೆ.

ಗೌರವ ಪ್ರಶಸ್ತಿಗೆ ಹಿರಿಯ ಕಲಾವಿದರಾದ ಪ್ರಕಾಶ ಗಡ್ಕರ್ (ಕಲಬುರ್ಗಿ), ಬಿ.ಆರ್.ಕೊರ್ತಿ (ದಾವಣಗೆರೆ) ಹಾಗೂ ಜಿ.ಎಂ.ಹೆಗಡೆ ತಾರಗೋಡ (ಶಿರಸಿ) ಅವರು ಆಯ್ಕೆಯಾಗಿದ್ದು, ಪ್ರಶಸ್ತಿ ತಲಾ ₹50 ಸಾವಿರ ಹಾಗೂ ಸ್ಮರಣಿಕೆ ಒಳಗೊಂಡಿದೆ.

ವಾರ್ಷಿಕ ಕಲಾ ಬಹುಮಾನಕ್ಕೆಗಣೇಶ್‌ ಪಿ.ದೊಡ್ಡಮನಿ (ಬೆಂಗಳೂರು), ವಿನಾಯಕ ರಾ.ಚಿಕ್ಕೋಡಿ (ಬಾಗಲ
ಕೋಟೆ), ಓಂಕಾರ ಕಲ್ಲಪ್ಪ ಮೇತ್ರೆ (ಬೀದರ್), ವಿನಾಯಕ ಎಸ್‌.ಹೊಸೂರ(ಬಾಗಲಕೋಟೆ), ವಿಜಯ್‌ ಎಸ್‌.ನಾಗವೇಕರ್‌ (ಬೆಂಗಳೂರು), ಕೆ.ಎಸ್‌.ಬಸವರಾಜು (ತುಮಕೂರು), ಭರತ್ಎಂ.ಲದ್ದಿಯವರ (ಧಾರವಾಡ‌), ಎಂ.ಎಸ್‌.ಲಿಂಗರಾಜು (ಚಿಕ್ಕಮಗಳೂರು), ಶಿವಕಾಂತ್‌ ಶೇಖರ್ (ಬೆಂಗಳೂರು) ಹಾಗೂ ತಿಪ್ಪಣ್ಣ ಎಸ್‌.ಪೂಜಾರಿ (ಕಲಬುರ್ಗಿ) ಅವರು ಆಯ್ಕೆಯಾಗಿದ್ದಾರೆ.ಬಹುಮಾನ ತಲಾ ₹25 ಸಾವಿರ ಹಾಗೂ ಫಲಕ ಒಳಗೊಂಡಿದೆ.

‘ಮಾರ್ಚ್ 21ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು’ ಎಂದು ಕರ್ನಾಟಕ ಲಲಿತಕಲಾ ಅಕಾಡೆಮಿ ಅಧ್ಯಕ್ಷ ಡಿ.ಮಹೇಂದ್ರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು