‘ಮಾನ್ಯತೆ ಸಿಗುವ ವಿಶ್ವಾಸ’

7
ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟ ಮತ್ತೆ ಚುರುಕು

‘ಮಾನ್ಯತೆ ಸಿಗುವ ವಿಶ್ವಾಸ’

Published:
Updated:

ಬೆಂಗಳೂರು: ‘ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಹಿನ್ನಡೆಗೆ ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟ ಕಾರಣವಲ್ಲ’ ಎಂಬ ಜಾಹೀರಾತು ನೀಡಿದ ಬಳಿಕ ಮೌನ ತಾಳಿದ್ದ ಜಾಗತಿಕ ಲಿಂಗಾಯತ ಮಹಾಸಭಾ ಮತ್ತೆ ಮೈಕೊಡವಿದೆ.

ವೈಯಕ್ತಿಕ ಕಾರಣಗಳಿಗಾಗಿ ತಿಂಗಳಿಗೂ ಹೆಚ್ಚು ಕಾಲ ಅಮೆರಿಕಕ್ಕೆ ತೆರಳಿದ್ದ ಮಹಾಸಭಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎಸ್‌.ಎಂ. ಜಾಮದಾರ ಎರಡು ದಿನಗಳ ಹಿಂದಷ್ಟೆ ವಾಪಸಾಗಿದ್ದಾರೆ.

ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಕಾಂಗ್ರೆಸ್‌ ಶಾಸಕ ಎಂ.ಬಿ. ಪಾಟೀಲ ಅವರನ್ನು ಶುಕ್ರವಾರ ಸಂಜೆ ಜಾಮದಾರ ಭೇಟಿ ಮಾಡಿ ಸುಮಾರು ನಾಲ್ಕು ಗಂಟೆ ಚರ್ಚೆ ನಡೆಸಿದ್ದಾರೆ. ಈ ವೇಳೆ ಹೋರಾಟಕ್ಕೆ ಮರುಜೀವ ನೀಡುವ ಬಗ್ಗೆ ಇಬ್ಬರೂ ವಿಚಾರ ವಿನಿಮಯ ನಡೆಸಿದ್ದಾರೆ.

ಮಾಧ್ಯಮ ಪ್ರತಿನಿಧಿಗಳ ಜೊತೆ ಶನಿವಾರ ಮಾತನಾಡಿದ ಎಂ.ಬಿ. ಪಾಟೀಲ, ‘ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಕೇಂದ್ರ ಸರ್ಕಾರ ಮಾನ್ಯತೆ ನೀಡುವ ವಿಶ್ವಾಸವಿದೆ. ಒಂದು ವೇಳೆ ನೀಡದೇ ಇದ್ದರೆ ಸುಪ್ರೀಂ ಕೋರ್ಟ್ ಇದೆಯಲ್ಲ’ ಎಂದರು.

‘ಲಿಂಗಾಯತ ಜಾಗತಿಕ ಧರ್ಮ ಆಗಬೇಕು. ಈ ಬಗ್ಗೆ ಕಟ್ಟಕಡೆಯ ಜನರಿಗೂ ಜಾಗೃತಿ ಮೂಡಿಸುತ್ತೇವೆ’ ಎಂದರು.

‘ಮಹಾಸಭಾದ ಸದಸ್ಯತ್ವ ನೋಂದಣಿ ಪ್ರಕ್ರಿಯೆ ಚುರುಕುಗೊಳಿಸಬೇಕು. ‌ಅಲ್ಲದೆ, ತಳಮಟ್ಟದಲ್ಲಿ ಧರ್ಮ ಜಾಗೃತಿ ಮೂಡಿಸಬೇಕಿದೆ.‌ ಈ ಉದ್ದೇಶದಿಂದ ಪ್ರಮುಖರು ಸೇರಿ ಸುದೀರ್ಘವಾಗಿ ಚರ್ಚೆ ನಡೆಸಿದ್ದೇವೆ’ ಎಂದು ಮಹಾಸಭಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಬಿ. ಪಾಟೀಲ ತಿಳಿಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !