ಬುಧವಾರ, ಆಗಸ್ಟ್ 4, 2021
22 °C

ಅನ್ಯರಾಜ್ಯದಿಂದ ಬರುವವರ ನೋಂದಣಿ ಮಾಡಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಹೊರ ರಾಜ್ಯಗಳಿಂದ ಬರುವ ಜನರ ನೋಂದಣಿ ಮಾಡಿಕೊಳ್ಳುವ ವ್ಯವಸ್ಥೆಯನ್ನು ರಾಜ್ಯದಲ್ಲಿ ಜಾರಿಗೆ ತರಬೇಕು ಎಂದು ಕನ್ನಡ ಗೆಳೆಯರ ಬಳಗವು ಸರ್ಕಾರವನ್ನು ಒತ್ತಾಯಿಸಿದೆ.

‘ರಾಜ್ಯದ ಬೇರೆ ಭಾಗಗಳಿಂದ ಬೆಂಗಳೂರಿಗೆ ಬಂದು ನೆಲೆಸಿದ್ದ ಜನ ಇಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವಂತೆಯೇ ತಮ್ಮ ಊರುಗಳಿಗೆ ಗುಳೆ ಹೋಗುತ್ತಿದ್ದಾರೆ. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪನವರೇ ‘ಬೆಂಗಳೂರು ತೊರೆಯಬೇಡಿ’ ಎಂದು ಮನವಿ ಮಾಡಿದರೂ ಕೇಳುತ್ತಿಲ್ಲ. ಇನ್ನೊಂದೆಡೆ  ತಮಿಳುನಾಡಿನಿಂದ ಜನ ಬೆಂಗಳೂರಿಗೆ ತಂಡೋಪತಂಡವಾಗಿ ವಲಸೆ ಬರುತ್ತಿದ್ದಾರೆ. ಕೆಲವು ದಿನಗಳ ಹಿಂದೆ ತಮಿಳುನಾಡಿನಿಂದ ಚಾಮರಾಜನಗರಕ್ಕೆ ಬರುತ್ತಿರುವ ತಮಿಳರನ್ನು ತಡೆಯಲು ಸ್ಥಳೀಯರು ಒತ್ತಾಯಿಸಿದ್ದರು.’

‘ಇಲ್ಲಿ ಕಾರ್ಮಿಕರ ಕೊರತೆ ಎದುರಿಸುತ್ತಿರುವ ಸುದ್ಧಿ ತಿಳಿದು ನೆರೆರಾಜ್ಯದವರು ವಲಸೆ ಬರುವುದು ಸಹಜ. ಆದರೆ, ಅದಕ್ಕೆ ಸರ್ಕಾರ ನಿಯಂತ್ರಣ ಹೊಂದದಿರುವುದು ಸರಿಯಲ್ಲ. ವಲಸಿಗರ ಬಗ್ಗೆ ಜಾಗೃತರಾಗದಿದ್ದರೆ ‘ಕನ್ನಡ ಅನಾಥ; ಕನ್ನಡಿಗ ಸ್ಥಳೀಯ ನಿರಾಶ್ರಿತ’ ಅನ್ನುವ ಸ್ಥಿತಿ ಮರುಕಳಿಸುತ್ತದೆ ಎಂದು ಬಳಗದ ಸಂಚಾಲಕ ರಾ.ನಂ. ಚಂದ್ರಶೇಖರ ಅವರು ಸರ್ಕಾರವನ್ನು ಎಚ್ಚರಿಸಿದ್ದಾರೆ. 
 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು