ಮಮತಾಗೆ ಮುಖಭಂಗ: ಎಸ್‌.ಎಂ. ಕೃಷ್ಣ

7

ಮಮತಾಗೆ ಮುಖಭಂಗ: ಎಸ್‌.ಎಂ. ಕೃಷ್ಣ

Published:
Updated:

ಬೆಂಗಳೂರು: ಶಾರದಾ ಚಿಟ್‌ ಫಂಡ್‌ ಹಗರಣದ ಕುರಿತು ಕೋಲ್ಕತ್ತದ ಪೊಲೀಸ್‌ ಆಯುಕ್ತ ರಾಜೀವ್‌ ಕುಮಾರ್‌ ಸಿಬಿಐ ವಿಚಾರಣೆಗೆ ಹಾಜರಾಗಬೇಕು ಎಂದು ಸುಪ್ರೀಂ ಕೋರ್ಟ್‌ ಆದೇಶದಿಂದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ತೀವ್ರ ಮುಖಭಂಗ ಆಗಿದೆ ಎಂದು ಬಿಜೆಪಿ ನಾಯಕ ಎಸ್‌.ಎಂ. ಕೃಷ್ಣ ಪ್ರತಿಕ್ರಿಯಿಸಿದ್ದಾರೆ.

ಹಗರಣ ಕುರಿತು ತನಿಖೆ ನಡೆಸಲು ಬಂದ ಸಿಬಿಐ ಅಧಿಕಾರಿಗಳನ್ನೇ ಬಂಧಿಸಲು ಮುಖ್ಯಮಂತ್ರಿ ಸೂಚಿಸಿರುವುದು ತಪ್ಪು. ಈ ಮೂಲಕ ಅವರು ಅಧಿಕಾರ ಹಾಗೂ ತಮ್ಮ ಸ್ಥಾನ ದುರುಪಯೋಗಪಡಿಸಿಕೊಂಡಿದ್ದಾರೆ. ಈಗ ಅಧಿಕಾರಿ ಖುದ್ದು ಹಾಜರಾಗಿ ವಿಚಾರಣೆ ಎದುರಿಸಬೇಕು ಎಂದು ಸುಪ್ರೀಂ ಕೋರ್ಟ್‌ ಸ್ಪಷ್ಟಪಡಿಸಿದೆ. ಈ ಮಧ್ಯೆ ರಾಜಕೀಯ ಮೈಲೇಜ್‌ಗಾಗಿ ಹಲವು ನಾಟಕೀಯ ಸನ್ನಿವೇಶಗಳನ್ನು ಮಮತಾ ಪ್ರದರ್ಶಿಸಿದರು. ಆದರೆ, ಸುಪ್ರೀಂ ಕೋರ್ಟ್‌ ಅವರ ಸ್ಥಾನವನ್ನು ತೋರಿಸಿದೆ ಎಂದು ವ್ಯಂಗ್ಯವಾಡಿದ್ದಾರೆ. 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !