ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಊರಿಗೆ ತೆರಳಲು ಸೈಕಲ್‌ನಲ್ಲೇ 250 ಕಿ.ಮೀ ಪ್ರಯಾಣ

Last Updated 10 ಮೇ 2020, 20:15 IST
ಅಕ್ಷರ ಗಾತ್ರ

ಸಂತೇಬೆನ್ನೂರು (ಚನ್ನಗಿರಿ ತಾ. ದಾವಣಗೆರೆ): ಲಾಕ್‌ಡೌನ್‌ನಿಂದಾಗಿ ಸಾರಿಗೆ ಸೌಲಭ್ಯವಿಲ್ಲದ್ದರಿಂದ ಕೃಷಿ ಕಾರ್ಮಿಕರೊಬ್ಬರು, ಅಂಗವಿಕಲತೆ ಇದ್ದರೂ ಊರಿಗೆ ತೆರಳಲು ಸೈಕಲ್‌ನಲ್ಲಿ ಸುಮಾರು 250 ಕಿ.ಮೀ ಸಂಚಾರಕ್ಕೆ ಮುಂದಾಗಿದ್ದಾರೆ.

ಸಿದ್ದು

ಚಿಕ್ಕಮಗಳೂರಿನಲ್ಲಿ ಕಾಫಿ ಎಸ್ಟೇಟ್‌ವೊಂದರ ಕಾರ್ಮಿಕ ಯುವಕ ಸಿದ್ದು ಅವರಿಗೆ ಬಲಗಾಲಿನ ಅಂಗವಿಕಲತೆ ಇದೆ. ಸ್ವಂತ ಊರು ಹುಬ್ಬಳ್ಳಿಗೆ ಹೊರಟಿದ್ದು, ಸೈಕಲ್‌ನಲ್ಲಿ ಭಾನುವಾರ ಇಲ್ಲಿನ ಬೀರೂರು-ಸಮ್ಮಸಗಿ ರಸ್ತೆಯಲ್ಲಿ ಸಾಗಿದರು.

ಹೇಗಾದರೂ ಊರು ತಲುಪಲು ಸಂಕಲ್ಪ ಮಾಡಿದರು. ₹ 500 ಕೊಟ್ಟು ಸೈಕಲ್‌ವೊಂದನ್ನು‌ ಖರೀದಿಸಿ, ಬಟ್ಟೆ-ಬರೆಯೊಂದಿಗೆ ಹೊರಟೇಬಿಟ್ಟರು. ಜತೆಯಲ್ಲಿ ಸೈಕಲ್ ಪಂಪ್ ಕೂಡ ಇಟ್ಟುಕೊಂಡು ಸಾಗಿಬಂದರು.

ಶನಿವಾರ ಬೆಳಿಗ್ಗೆ ಚಿಕ್ಕಮಗಳೂರಿನಿಂದ ಪ್ರಯಾಣ ಬೆಳೆಸಿ ಸಂಜೆ ಚನ್ನಗಿರಿ ತಲುಪಿ, ಅಲ್ಲೇ ತಂಗಿದ್ದರು. ಭಾನುವಾರ ಬೆಳಿಗ್ಗೆ ಸಂತೇಬೆನ್ನೂರು ಮೂಲಕ ದಾವಣಗೆರೆಯತ್ತ ಪ್ರಯಾಣ ಮುಂದುವರಿಸಿದರು.

ರಾಷ್ಟ್ರೀಯ ಹೆದ್ದಾರಿ-4 ರ ಮೂಲಕ ಊರು ತಲುಪುವ ವಿಶ್ವಾಸ ಅವರು. ಗ್ರಾಮದಲ್ಲಿ ಕೆಲ ನಿವಾಸಿಗಳು ಬ್ರೆಡ್, ಬಿಸ್ಕತ್ ಪ್ಯಾಕ್‌, ಚಹಾ ನೀಡಿ ಉಪಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT