ಮಂಗಳವಾರ, ಫೆಬ್ರವರಿ 18, 2020
29 °C

ಮಂಗಳೂರು| ಕೆಂಜಾರಿನ ವಾಣಿಜ್ಯ ಸಂಕೀರ್ಣದಲ್ಲೂ ಬಾಂಬ್ ಇರಿಸಲು ನಡೆದಿತ್ತು ಪ್ರಯತ್ನ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಇಲ್ಲಿನ ಬಜ್ಪೆಯ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಇರಿಸಿದ್ದ ಶಂಕಿತ ಆರೋಪಿ ಕೆಂಜಾರು ಬಳಿ ವಾಣಿಜ್ಯ ಸಂಕೀರ್ಣದಲ್ಲಿ ಬಾಂಬ್ ಇರಿಸಲು ಯತ್ನಿಸಿದ್ದ ಎಂಬ ಮಾಹಿತಿ ತನಿಖೆ ವೇಳೆ ಬೆಳಕಿಗೆ ಬಂದಿದೆ.

ಸೋಮವಾರ ಬೆಳಿಗ್ಗೆ ನಗರ ಸಾರಿಗೆ ಬಸ್ ನಲ್ಲಿ ಬಂದಿಳಿದ ಶಂಕಿತ ವ್ಯಕ್ತಿ, ಕೆಂಜಾರುವಿನಲ್ಲಿ ವಾಣಿಜ್ಯ ಸಂಕೀರ್ಣವೊಂದರಲ್ಲಿರುವ ರಾಯಲ್ ಮೆನ್ಸ್ ಸಲೂನ್ ಎಂಬ ಕ್ಷೌರದಂಗಡಿಗೆ ಹೋಗಿ ಮುಖ ಕ್ಷೌರ ಮಾಡಿಸಿಕೊಂಡಿದ್ದ. ಎರಡು ಬ್ಯಾಗ್ ತಂದಿದ್ದ ಆರೋಪಿ ಒಂದನ್ನು ಅಲ್ಲೇ ಇರಿಸಿ ಹೋಗಲು ಯತ್ನಿಸಿದ್ದ. ಈ ಸಂಬಂಧ ಪೊಲೀಸರು ಕ್ಷೌರದಂಗಡಿ ಮಾಲೀಕ‌ ಸಲ್ಮಾನ್ ಅವರನ್ನು ವಿಚಾರಣೆ ನಡೆಸಿದ್ದಾರೆ.

'ಆ ವ್ಯಕ್ತಿ ಟೊಪ್ಪಿ ಧರಿಸಿಕೊಂಡು, ತಲೆ ಬಗ್ಗಿಸಿಯೇ ಮಾತನಾಡುತ್ತಿದ್ದ. ಮುಖ ನೋಡಲು ಸಾಧ್ಯವಾಗಲಿಲ್ಲ. ಒಂದು ಬ್ಯಾಗ್ ಸಲೂನ್ ನಲ್ಲಿ ಇಟ್ಟು ಹೋಗುತ್ತೇನೆ ಎಂದ. ನಾನು ಅದಕ್ಕೆ ಒಪ್ಪಲಿಲ್ಲ. ವಾಣಿಜ್ಯ ಸಂಕೀರ್ಣದ ಭದ್ರತಾ ಸಿಬ್ಬಂದಿ ಕೂಡ ನಿರಾಕರಿಸಿದರು' ಎಂದು ಸಲ್ಮಾನ್ ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು