ನವದೆಹಲಿ: ಎಂಜಿ ಮೋಟಾರ್‌ಇಂಡಿಯಾ ಸಂಸ್ಥೆಯು 'ಝಡ್ಎಸ್'ಹೆಸರಿನ ದೇಶದ ಮೊದಲ ಎಲೆಕ್ಟ್ರಿಕ್ ಇಂಟರ್ನೆಟ್ ಕಾರು ಬಿಡುಗಡೆಗೊಳಿಸಿದೆ. ಈ ಮೂಲಕ ಪರಿಸರ ಸ್ನೇಹಿ ವಾಹನಗಳ ತಯಾರಿಕೆಗೆ ಈ ಸಂಸ್ಥೆ ಹೊಸ ನಾಂದಿ ಹಾಡಿದೆ.

ಪ್ರಸಿದ್ಧ ಬ್ಯಾಟರಿ ತಯಾರಿಕಾ ಸಂಸ್ಥೆ ಕೆಎಟಿಎಲ್ (CATL)ನ ಹೊಚ್ಚ ಹೊಸ 44.5 ಕಿಲೊವ್ಯಾಟ್ ಹವರ್(kWh) ಹಾಗೂ ಲಿಕ್ವಿಡ್-ಕೂಲ್ವ್ಯವಸ್ಥೆಬ್ಯಾಟರಿಯನ್ನು ಈ ಕಾರು ಹೊಂದಿದೆ. ಬ್ಯಾಟರಿ ಒಮ್ಮೆ ಸಂಪೂರ್ಣಚಾರ್ಜ್ ಮಾಡಿದರೆ 340 ಕಿ.ಮೀ.ಚಲಿಸಬಹುದು. ಕೇವಲ 8.5 ಸೆಕೆಂಡ್‌ನಲ್ಲಿ 100 ಕಿ.ಮೀ ವೇಗತಲುಪಬಲ್ಲ ಸಾಮರ್ಥ್ಯ ಹೊಂದಿದೆ.

ಈ ಕಾರಿನಲ್ಲಿ ಚಾರ್ಜಿಂಗ್ ಕೇಬಲ್ ಕೂಡ ಇದೆ. ಇದನ್ನು ಬಳಸಿ ಎಲ್ಲಿ ಬೇಕಾದರೂ ಚಾರ್ಜ್ ಮಾಡಿಕೊಳ್ಳಬಹುದು. ಮನೆ ಹಾಗೂ ಕಚೇರಿಯಲ್ಲಿ ಚಾರ್ಜ್ ಮಾಡಿಕೊಳ್ಳಲು ಎಸಿ ಫಾಸ್ಟ್ ಚಾರ್ಜರ್ ಕೂಡ ಒದಗಿಸಲಾಗಿದೆ. ಕೆಲವು ಎಂಜಿ ಮೋಟಾರ್ ಷೋರೂಂಗಳಲ್ಲಿ ಡಿಸಿ ಸೂಪರ್ ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಒದಗಿಸಲು ಸಂಸ್ಥೆ ಚಿಂತನೆ ನಡೆಸಿದೆ.

ಮನೆಯಲ್ಲಿ ಚಾರ್ಜ್ ಮಾಡಲು 6-8 ತಾಸು ಬೇಕು ಹಾಗೂ ಸೂಪರ್ ಫಾಸ್ಟ್ ಡಿಸಿ ಚಾರ್ಜರ್‌ನಿಂದ ಶೇ 80ರಷ್ಟು ಚಾರ್ಜ್ ಕೇವಲ 50 ನಿಮಿಷಗಳಲ್ಲಿಮಾಡಬಹುದು.

'ಈ ಎಲೆಕ್ಟ್ರಿಕ್ ವಾಹನ ಪರಿಸರ ವ್ಯವಸ್ಥೆಗೆ ತನ್ನದೆ ರೀತಿಯಲ್ಲಿ ಕೊಡುಗೆ ನೀಡಲಿದೆ. ಇಂಗ್ಲೆಂಡ್, ಆಸ್ಟ್ರೇಲಿಯಾ, ಯೂರೋಪ್ ಸೇರಿದಂತೆ 10ಕ್ಕೂ ಹೆಚ್ಚು ದೇಶಗಳ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಝಡ್ಎಸ್ ಇವಿ ವಾಹನ ಯಶಸ್ಸು ಕಂಡಿದೆ. ಭಾರತಲ್ಲೂ ಯಶಸ್ಸು ಕಾಣಲಿದೆ ಎನ್ನುವ ವಿಶ್ವಾಸ ನಮ್ಮದು' ಎಂದು ಎಂಜಿ ಮೋಟಾರ್ ಇಂಡಿಯಾದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ರಾಜೀವ್ ಚಾಬಾ ಹೇಳಿದರು.

ಚಾರ್ಜಿಂಗ್ ಸ್ಟೇಷನ್ ತೆರೆಯಲು ಯೋಜನೆ

ಈ ಎಲೆಕ್ಟ್ರಿಕ್ ಕಾರನ್ನು ದೇಶದಾದ್ಯಂತ ಸುಮಾರು 1ಲಕ್ಷ ಕಿ.ಮೀ ಚಾಲನೆ ಮಾಡಿ ಪರೀಕ್ಷೆ ಮಾಡಲಾಗಿದೆ ಎಂದು ಕಂಪನಿ ತಿಳಿಸಿದೆ. ದೆಹಲಿ, ಹೈದರಾಬಾದ್, ಮುಂಬೈ, ಬೆಂಗಳೂರು ಮತ್ತು ಅಹಮದಾಬಾದ್‍ನಲ್ಲಿ ಷೋರೂಂಗಳಿದ್ದು, ಮುಂದಿನ ಐದು ವರ್ಷಗಳಲ್ಲಿ ಪ್ರಮುಖ ಮೆಟ್ರೊ ನಗರಗಳಲ್ಲಿ ಪ್ರತಿ 5 ಕಿ.ಮೀ ಮತ್ತು ಹೆದ್ದಾರಿಗಳಲ್ಲಿ ಪ್ರತಿ 25 ಕಿ.ಮೀ.ಗೆ ಚಾರ್ಜಿಂಗ್ ಸ್ಟೇಷನ್ ತೆರೆಯಲು ಯೋಜನೆ ರೂಪಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.