ನಾಯಿ ಬೊಗಳಿದರೆ ಏನಾಗುತ್ತದೆ: ಬಿಜೆಪಿ ವಿರುದ್ಧ ಸಚಿವ ವೆಂಕಟರಮಣಪ್ಪ ವಾಗ್ದಾಳಿ

ಮಂಗಳವಾರ, ಮಾರ್ಚ್ 26, 2019
31 °C

ನಾಯಿ ಬೊಗಳಿದರೆ ಏನಾಗುತ್ತದೆ: ಬಿಜೆಪಿ ವಿರುದ್ಧ ಸಚಿವ ವೆಂಕಟರಮಣಪ್ಪ ವಾಗ್ದಾಳಿ

Published:
Updated:

ಚಿತ್ರದುರ್ಗ: ಬಿಜೆಪಿಯವರಿಗೆ ಬೇರೆ ಕೆಲಸವೇ ಇಲ್ಲ. ಕಾಂಗ್ರೆಸ್‌, ಜೆಡಿಎಸ್‌ ಬಿಟ್ಟು ಹತ್ತಾರು ಶಾಸಕರು ಬರುತ್ತಾರೆ ಎಂದು ಹೇಳುತ್ತಲೇ ಇದ್ದಾರೆ. ಬೊಗೊಳೊ ನಾಯಿ ಬೊಗಳಿದರೆ ಏನುಗುತ್ತದೆ ಎಂದು ಕಾರ್ಮಿಕ ಸಚಿವ ವೆಂಕಟರಮಣಪ್ಪ ವ್ಯಂಗ್ಯವಾಡಿದರು.

ಉಮೇಶ್‌ ಜಾದವ್‌ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ‘ಶಾಸಕರೊಬ್ಬರು ರಾಜೀನಾಮೆ ನೀಡುವುದರಿಂದ ಸಮ್ಮಿಶ್ರ ಸರ್ಕಾರಕ್ಕೆ ತೊಂದರೆ ಆಗುವುದಿಲ್ಲ. ಬಿ.ಎಸ್‌.ಯಡಿಯೂರಪ್ಪ ಅವರ ಕನಸು ನನಸಾಗುವುದಿಲ್ಲ. ಅಂದುಕೊಂಡಂತೆ ನಡೆಯುವಂತಿದ್ದರೆ ಯಡಿಯೂರಪ್ಪ ಯಾವತ್ತೋ ಮುಖ್ಯಮಂತ್ರಿ ಆಗಿರುತ್ತಿದ್ದರು. ಮೂರು ವರ್ಷಕ್ಕೆ ಮುಖ್ಯಮಂತ್ರಿ ಸ್ಥಾನ ಕಳೆದುಕೊಳ್ಳುತ್ತಿರಲಿಲ್ಲ’ ಎಂದು ವಾಗ್ದಾಳಿ ನಡೆಸಿದರು.

‘ಒಂದು ತಾಯಿ ಮಕ್ಕಳೇ ಕಿತ್ತಾಡುತ್ತಾರೆ. ಗಂಡ–ಹೆಂಡತಿ ನಡುವೆಯೇ ಗಲಾಟೆ ನಡೆಯುತ್ತದೆ. ಕಂಪ್ಲಿ ಶಾಸಕ ಗಣೇಶ್‌ ಹಾಗೂ ವಿಜಯನಗರ ಶಾಸಕ ಆನಂದಸಿಂಗ್ ನಡುವೆ ಗಲಾಟೆ ನಡೆದಿದ್ದರಲ್ಲಿ ವಿಶೇಷವೇನೂ ಇಲ್ಲ. ಅವರಿಬ್ಬರೂ ಸ್ನೇಹಿತರು. ಯಾವುದೋ ವಿಚಾರಕ್ಕೆ ಗಲಾಟೆ ನಡೆದಿದೆ. ಇದು ನಮ್ಮ ಸಂಸಾರ, ನಾವೇ ಸರಿಮಾಡಿಕೊಳ್ಳುತ್ತೇವೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !