ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೊರೆಸ್ವಾಮಿ ಅವಹೇಳನ: ವಿಧಾನಸಭೆಯಲ್ಲಿ ಚರ್ಚೆಗೆ ವಿಪಕ್ಷಗಳ ಪಟ್ಟು

Last Updated 2 ಮಾರ್ಚ್ 2020, 7:22 IST
ಅಕ್ಷರ ಗಾತ್ರ

ಬೆಂಗಳೂರು: ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ದೊರೆಸ್ವಾಮಿ ವಿರುದ್ಧ ಕೀಳು ಮಟ್ಟ ಹೇಳಿಕೆ ನೀಡಿದ ವಿಷಯ ಪ್ರಸ್ತಾಪ ಕ್ಕೆ ಅವಕಾಶ ನೀಡದ್ದನ್ನು ಪ್ರತಿಭಟಿಸಿ ವಿರೋಧ ಪಕ್ಷಗಳು ವಿಧಾನಸಭೆಯಲ್ಲಿ ಧರಣಿ ನಡೆಸಿದರು.

ಕಲಾಪ ಆರಂಭಗೊಂಡಾಗ ರಾಜ್ಯಪಾಲರ ಭಾಷಣದ ಮೇಲೆ ಮುಖ್ಯ ಮಂತ್ರಿ ಉತ್ತರ ನೀಡುವಂತೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಸೂಚಿಸಿದರು. ಆದರೆ, ಅದಕ್ಕೆ ಮೊದಲು ಯತ್ನಾಳ ಕುರಿತ ವಿಷಯ ಪ್ರಸ್ತಾಪ ಕ್ಕೆ ಅವಕಾಶ ನೀಡಬೇಕು ಎಂದು ಸಿದ್ದರಾಮಯ್ಯ ಪಟ್ಟು ಹಿಡಿದರು.

ವಿಷಯ ಪ್ರಸ್ತಾಪ ಕ್ಕೆ ನೋಟೊಸ್ ನೀಡಬೇಕು , ನೋಟಿಸ್ ನೀಡದೇ ವಿಷಯ ಪ್ರಸ್ತಾಪ ಮಾಡುವಂತಿಲ್ಲ, ಮೊದಲು ನೋಟಿಸ್ ಕೊಡಿ ಎಂದು ಸಭಾಧ್ಯಕ್ಷರು ತಿಳಿಸಿದರು.

ಸಿದ್ದರಾಮಯ್ಯ ಅದಕ್ಕೆ ಒಪ್ಪಲಿಲ್ಲ, ಸಭಾಧ್ಯಕ್ಷ ಕಾಗೇರಿ ಮುಖ್ಯ ಮಂತ್ರಿ ಉತ್ತರಕ್ಕೆ ಅವಕಾಶ ನೀಡಿದರು. ಇದನ್ನು ಪ್ರತಿಭಟಿಸಿ, ಸಭಾಧ್ಯಕ್ಷರ ಪೀಠದ ಮುಂದೆ ಧರಣಿ ಆರಂಭಿಸಿದರು. ಮುಖ್ಯಮಂತ್ರಿ ಉತ್ತರದ ಬಳಿಕ ಕಲಾಪವನ್ನು ಅರ್ಧಗಂಟೆ ಕಾಲ ಮುಂದೂಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT