ಮಂಗಳವಾರ, ಏಪ್ರಿಲ್ 20, 2021
31 °C

ಅಂಗೀಕಾರವಾಗಬೇಕಾದರೆ ಶಾಸಕರ ರಾಜೀನಾಮೆ ಪತ್ರ ಹೇಗಿರಬೇಕು?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಶಾಸಕರು ನೀಡಿದ ರಾಜೀನಾಮೆ ಅಂಗೀಕಾರವಾಗಬೇಕಾದರೆ ಆ ಪತ್ರ ಹೇಗಿರಬೇಕು, ತಿರಸ್ಕೃತವಾದರೆ ಕಾರಣವೇನು ಎಂಬ ಕುತೂಹಲದ ಚರ್ಚೆ ಎಲ್ಲೆಡೆ ನಡೆದಿದೆ. 

ವಿಧಾನಸಭೆಯ ಕಾರ್ಯ ವಿಧಾನ ಮತ್ತು ನಡವಳಿಕೆಯ ನಿಯಮಗಳು ಹೀಗೆ ಹೇಳುತ್ತವೆ. ಅದರ ಪ್ರಕಾರ ಸಭಾಧ್ಯಕ್ಷರು ರಾಜೀನಾಮೆ ತಿರಸ್ಕರಿಸಲು ಸಾಧ್ಯವಿಲ್ಲ. ಬದಲಿಗೆ, ತಪ್ಪು ಸರಿಪಡಿಸಿ ಮತ್ತೊಮ್ಮೆ ಪಡೆದುಕೊಳ್ಳಬಹುದು.

ರಾಜೀನಾಮೆ ಹೇಗಿರಬೇಕು

* ಶಾಸಕ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾದರೆ, ಸಭಾಧ್ಯಕ್ಷರನ್ನು ಉದ್ದೇಶಿಸಿ, ರಾಜೀನಾಮೆ ಕೊಡುವ ಇಚ್ಛೆಯನ್ನು ಪತ್ರದಲ್ಲಿ ತಿಳಿಸಬೇಕು. ರಾಜೀನಾಮೆ ಪತ್ರದಲ್ಲಿ ಕಾರಣ ನೀಡುವಂತಿಲ್ಲ. 

* ಶಾಸಕ ರಾಜೀನಾಮೆ ಪತ್ರದಲ್ಲಿ ಕಾರಣ ಮತ್ತು ಸಂಬಂಧಪಡದ ವಿಷಯವನ್ನು ಕೊಡುವಂತಿಲ್ಲ.

* ರಾಜೀನಾಮೆ ಪತ್ರವನ್ನು ಸಭಾಧ್ಯಕ್ಷರಿಗೆ ಖುದ್ದಾಗಿ ನೀಡಿ, ರಾಜೀನಾಮೆಯನ್ನು ಸ್ವಂತ ಇಚ್ಛೆಯಿಂದ ನೀಡುತ್ತಿರುವುದಾಗಿ ಮತ್ತು ಅದು ನೈಜವಾದುದು ಎಂದು ತಿಳಿಸಬೇಕು. ಅದರಲ್ಲಿ ಯಾವುದೇ ಪ್ರತಿಕೂಲ ಮಾಹಿತಿ ಅಥವಾ ತಿಳಿವಳಿಕೆ ಇರದಿದ್ದರೆ ಮತ್ತು ಅವರಿಗೆ ರಾಜೀನಾಮೆ ಬಗ್ಗೆ ಸಮಾಧಾನವಾದರೆ, ಸಭಾಧ್ಯಕ್ಷರು ರಾಜೀನಾಮೆ ಅಂಗೀಕರಿಸಬಹುದು.

* ನಾನು...ದಿನಾಂಕದಿಂದ, ವಿಧಾನಸಭೆಯಲ್ಲಿನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದಷ್ಟೇ ಬರೆಯಬೇಕು. ಅದನ್ನು ಕೈ ಬರಹದಲ್ಲೇ ಇರಬೇಕು. ಟೈಪ್‌ ಮಾಡಿ ಸಲ್ಲಿಸುವಂತಿಲ್ಲ.

ತಿರಸ್ಕರಿಸಲು ಕಾರಣಗಳು

* ಪತ್ರವನ್ನು ಸಭಾಧ್ಯಕ್ಷರಿಗೆ ಖುದ್ದಾಗಿ ನೀಡದೇ, ಅಂಚೆ ಅಥವಾ ಇತರರ ಮೂಲಕ ನೀಡಿದಾಗ, ಅದು ನಿಜವಾದುದೇ ಎಂಬುದನ್ನು ವಿಚಾರಣೆ ನಡೆಸಬಹುದು. ವಿಚಾರಣೆ ಬಳಿಕ ಸ್ವ ಇಚ್ಛೆಯಿಂದ ನೀಡಿದ್ದು ಅಲ್ಲ ಎಂಬುದು ಮನವರಿಕೆ ಆದರೆ ರಾಜೀನಾಮೆ ತಿರಸ್ಕರಿಸಬಹುದು.

* ಪತ್ರವನ್ನು ಸಭಾಧ್ಯಕ್ಷರು ಅಂಗೀಕರಿಸುವುದಕ್ಕೆ ಮುನ್ನ ಶಾಸಕ ಅದನ್ನು ಹಿಂದಕ್ಕೆ ಪಡೆಯಬಹುದು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು