ಭಾನುವಾರ, ಜನವರಿ 19, 2020
26 °C

ಸಾಗರ: ಮಂಗನ ಕಾಯಿಲೆ ಮಹಿಳೆ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಾಗರ: ತಾಲ್ಲೂಕಿನ ಸೀಗೆಮಕ್ಕಿಯ ಹೂವಮ್ಮ (58) ಮಂಗನ ಕಾಯಿಲೆಯಿಂದ ಶನಿವಾರ ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಕಳೆದ ವರ್ಷ ತಾಲ್ಲೂಕಿನಲ್ಲಿ ಮಂಗನ ಕಾಯಿಲೆಯಿಂದ 23 ಮಂದಿ ಮೃತಪಟ್ಟಿದ್ದರು. ಇದು ಈ ವರ್ಷದ ಮೊದಲನೇ ಪ್ರಕರಣ. ಭರತ್ ಎಂಬ ಯುವಕನಲ್ಲಿಯೂ ಮಂಗನ ಕಾಯಿಲೆ ವೈರಾಣು ಪತ್ತೆಯಾಗಿದೆ. ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸದ್ಯ ಚೇತರಿಸಿಕೊಂಡಿದ್ದಾರೆ.

ಹೂವಮ್ಮ ತನಗೆ ವಯಸ್ಸಾಗಿದೆ ಹಾಗೂ ರಕ್ತದೊತ್ತಡ ಇದೆ ಎಂಬ ಕಾರಣಕ್ಕೆ ಮಂಗನ ಕಾಯಿಲೆ ತಡೆಯಲು ನೀಡುವ ಲಸಿಕೆಯನ್ನು ಹಾಕಿಸಿಕೊಂಡಿರಲಿಲ್ಲ ಎನ್ನಲಾಗಿದೆ. 

 

ಪ್ರತಿಕ್ರಿಯಿಸಿ (+)