ಚಲನಚಿತ್ರ ನಿರ್ದೇಶಕ ಎಂ.ಎಸ್.ಸತ್ಯು ಅಸಮಾಧಾನ
ಸಂಸ್ಕೃತಿಯ ಮೇಲೂ ಸುಂಕ ಖಂಡನೀಯ: ಎಂ.ಎಸ್ ಸತ್ಯು

ಉಡುಪಿ: ಸಂಸ್ಕೃತಿಯ ಮೇಲೂ ಸುಂಕ ಹಾಕುತ್ತಿರುವ ಸರ್ಕಾರದ ಕ್ರಮ ಖಂಡನೀಯ ಎಂದು ಖ್ಯಾತ ಚಲನಚಿತ್ರ ನಿರ್ದೇಶಕ ಎಂ.ಎಸ್.ಸತ್ಯು ಅಸಮಾಧಾನ ವ್ಯಕ್ತಪಡಿಸಿದರು.
ಪುರಭವನದಲ್ಲಿ ಮಂಗಳವಾರ ನಡೆದ ನಾಟಕ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ರಂಗಭೂಮಿ, ಸಂಸ್ಕೃತಿ ಬೆಳವಣಿಗೆಗೆ ಸರ್ಕಾರ ಬೆಂಬಲ ನೀಡಬೇಕು. ಬದಲಾಗಿ ಹಾಡು, ನೃತ್ಯ, ಕವಿ ಸಮ್ಮೇಳನಗಳ ಮೇಲೂ ಶೇ 18ರಷ್ಟು ಜಿಎಸ್‌ಟಿ ವಿಧಿಸುತ್ತಿರುವುದು ಯಾವ ನ್ಯಾಯ. ಈ ವಿಚಾರದಲ್ಲಿ ರಂಗಕರ್ಮಿಗಳು ಆಂದೋಲನ ಆರಂಭಿಸಬೇಕು. ಬುದ್ಧಿ ಇಲ್ಲದ ಸರ್ಕಾರಕ್ಕೆ ದೊಣ್ಣೆ ಅಥವಾ ಮಾತಿನ ಮೂಲಕ ಎಚ್ಚರಿಕೆ ನೀಡಬೇಕು ಎಂದರು.
ಬೆಂಗಳೂರಿನಲ್ಲಿ ಪಿಟೀಲು ಚೌಡಯ್ಯ ಅವರ ಸ್ಮಾರಕ ಹಾಗೂ ರಂಗಮಂದಿರ ನಿರ್ಮಾಣಕ್ಕೆ ಹಿಂದೆ ರಾಜ್ಯ ಸರ್ಕಾರ ಒಂದು ರೂಪಾಯಿಗೆ ಜಮೀನು ನೀಡಿತ್ತು. ಆದರೆ, ಎಷ್ಟು ಬಾಡಿಗೆ ಪಡೆಯಬೇಕು ಎಂಬ ನಿಯಮ ರೂಪಿಸಲಿಲ್ಲ, ಪರಿಣಾಮ, ಮನಸ್ಸಿಗೆ ಬಂದಷ್ಟು ಬಾಡಿಗೆ ವಸೂಲಿ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಬರಹ ಇಷ್ಟವಾಯಿತೆ?
0
0
0
0
0
0 comments
View All