ಸೋಮವಾರ, ಮಾರ್ಚ್ 8, 2021
25 °C

ಮೈಸೂರು: ಕಾರು ಹತ್ತಿಸಿ ಇನ್‌ಸ್ಪೆಕ್ಟರ್‌ ಹತ್ಯೆಗೆ ಯತ್ನ, ನಾಲ್ವರು ಆರೋಪಿಗಳ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ವಾಹನ ತಪಾಸಣೆ ನಡೆಸುತ್ತಿದ್ದ ಕುವೆಂಪುನಗರ ಠಾಣೆ ಇನ್‌ಸ್ಪೆಕ್ಟರ್‌ ರಾಜು ಮೇಲೆ ಕಾರು ಹತ್ತಿಸಿ ಕೊಲ್ಲಲು ಯತ್ನಿಸಿದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. 

ಕುವೆಂಪುನಗರ ನಿವಾಸಿಗಳಾದ ಕಿರಣ್ (30), ಕೀರ್ತಿ (35), ಕಿರಣ್‌ಕುಮಾರ್ (34), ಮಂಜುನಾಥ್ (32) ಬಂಧಿತರು.

ಇನ್‌ಸ್ಪೆಕ್ಟರ್ ರಾಜು ಅವರು ಬೋಗಾದಿ ಚೆಕ್‌ಪೋಸ್ಟ್‌ ಬಳಿ ಭಾನುವಾರ ರಾತ್ರಿ 12.30ರ ಸಮಯದಲ್ಲಿ ವಾಹನಗಳನ್ನು ತಪಾಸಣೆ ಮಾಡುತ್ತಿರುವುದನ್ನು ಗಮನಿಸಿದ ಆರೋಪಿಗಳು, ಕಾರನ್ನು ಹಿಂದಕ್ಕೆ ತಿರುಗಿಸಿಕೊಂಡು ಪರಾರಿಯಾಗಲು ಯತ್ನಿಸಿದರು. ಅನುಮಾನಗೊಂಡು ಕಾರನ್ನು ಬೆನ್ನಟ್ಟಿ ಬ್ಯಾಂಕರ್ಸ್ ಕಾಲೊನಿಯ ಸಾಯಿ ಸರಸ್ವತಿ ಶಾಲೆ ಬಳಿ ಪೊಲೀಸರು ವಾಹನ ತಡೆದರು.ವಾಹನದಿಂದ ಕೆಳಗೆ ಇಳಿದು ಕಾರಿನತ್ತ ಬರುತ್ತಿದ್ದ ರಾಜು ಮೇಲೆ ಕಾರು ಹರಿಸಿ ಕೊಲ್ಲಲು ಯತ್ನಿಸಿದ್ದಾರೆ. ಈ ವೇಳೆಗೆ ಸ್ಥಳಕ್ಕೆ ಬಂದ ಸರಸ್ವತಿಪುರಂ ಠಾಣೆ ಇನ್‌ಸ್ಪೆಕ್ಟರ್ ಧನರಾಜ್ ಹಾಗೂ ಸಿಬ್ಬಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು