ಶುಕ್ರವಾರ, ನವೆಂಬರ್ 22, 2019
26 °C

Video | ಚಾಮುಂಡಿಬೆಟ್ಟದ ನಂದಿಗೆ ಮಹಾರುದ್ರಾಭಿಷೇಕ

Published:
Updated:

ಮೈಸೂರು: ಮುಂಜಾನೆ ಸೂರ್ಯನ ಕಿರಣಗಳು ಬೀಳುವ ಹೊತ್ತಾಗಿತ್ತು. ಚಾಮುಂಡಿಬೆಟ್ಟದ ಬೃಹತ್‌ ನಂದಿ ವಿಗ್ರಹಕ್ಕೆ ಹಾಲು, ಮೊಸರು, ಬಿಲ್ವ ಪತ್ರೆಗಳು, ಅರಿಸಿನ, ಕುಂಕುಮ ಅಭಿಷೇಕ ಮಾಡಲಾಯಿತು. 

ಮೆಟ್ಟಿಲು ಹತ್ತುವ ಬಳಗವು ಕಾರ್ತಿಕ ಸೋಮವಾರದ ಪ್ರಯುಕ್ತ ನಡೆಸಿದ ಮಹಾರುದ್ರಾಭಿಷೇಕದಲ್ಲಿ ಚಾಮುಂಡಿಬೆಟ್ಟದ ನಂದಿ ವಿಗ್ರಹವು ವಿವಿಧ ವರ್ಣಗಳಲ್ಲಿ ಕಂಗೊಳಿಸಿತು.

ಒಮ್ಮೆ ಶ್ವೇತ ವರ್ಣದಲ್ಲಿ ಕಂಡರೆ, ಮತ್ತೊಮ್ಮೆ ಕೆಂಪು, ಅರಿಸಿಣದ ಬಣ್ಣಗಳಲ್ಲಿ ಮೈದೋರಿತು. ನಂತರ, ಫಲಾಭಿಷೇಕವನ್ನು ನೆರವೇರಿಸಲಾಯಿತು.     

 

ಪ್ರತಿಕ್ರಿಯಿಸಿ (+)