ತೋಂಟದ ಸಿದ್ಧಲಿಂಗ ಶ್ರೀಗಳ ಸ್ಮರಣಾರ್ಥ ರಾಷ್ಟ್ರೀಯ ಪ್ರಶಸ್ತಿ

ಶನಿವಾರ, ಮೇ 25, 2019
32 °C
70ನೇ ಜಯಂತಿ: ಫೆ.21ರಂದು ಗದುಗಿನಲ್ಲಿ ಭಾವೈಕ್ಯ ಯಾತ್ರೆ

ತೋಂಟದ ಸಿದ್ಧಲಿಂಗ ಶ್ರೀಗಳ ಸ್ಮರಣಾರ್ಥ ರಾಷ್ಟ್ರೀಯ ಪ್ರಶಸ್ತಿ

Published:
Updated:
Prajavani

ಗದಗ: ಗದುಗಿನ ತೋಂಟದಾರ್ಯ ಮಠದ ಲಿಂಗೈಕ್ಯ ಸಿದ್ಧಲಿಂಗ ಶ್ರೀಗಳ ಸ್ಮರಣಾರ್ಥ, ಪ್ರತಿವರ್ಷ ವಿಜಯ ದಶಮಿಯಂದು ಬಸವ ತತ್ವ ಸಾಧಕರಿಗೆ ₹5 ಲಕ್ಷ ಮೊತ್ತದ ರಾಷ್ಟ್ರೀಯ ಪ್ರಶಸ್ತಿ ನೀಡಲಾಗುವುದು ಎಂದು ಮಠದ ಆಡಳಿತಾಧಿಕಾರಿ ಪ್ರೊ. ಎಸ್‌.ಎಸ್‌. ಪಟ್ಟಣಶೆಟ್ಟಿ ಹೇಳಿದರು.

ರಾಜ್ಯ ಸರ್ಕಾರ 2009ರಲ್ಲಿ ಶ್ರೀಗಳಿಗೆ ನೀಡಿದ್ದ ರಾಷ್ಟ್ರೀಯ ಬಸವ ಪುರಸ್ಕಾರದ ಪ್ರಶಸ್ತಿ ಮೊತ್ತವಾದ ₹10 ಲಕ್ಷವನ್ನು ಈ ಪ್ರಶಸ್ತಿ ನಿಧಿಗೇ ವರ್ಗಾಯಿಸಲಾಗುವುದು ಎಂದು ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸಿದ್ಧಲಿಂಗ ಶ್ರೀಗಳ 70ನೇ ವರ್ಷದ ಜಯಂತಿಯನ್ನು ಭಾವೈಕ್ಯ ದಿನವನ್ನಾಗಿ ಫೆ.21ರಂದು ಆಚರಿಸಲಾಗುತ್ತಿದ್ದು, ಅಂದು ನಗರದಲ್ಲಿ ಭಾವೈಕ್ಯ ಯಾತ್ರೆ ನಡೆಯಲಿದೆ ಎಂದು ಅವರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !