ಮಡಿಕೇರಿ | ತೋಟಕ್ಕೆ ದಾಖಲೆ ಎಸೆದ ಅಂಚೆ ಸಿಬ್ಬಂದಿ ಬಂಧನ

ಸುಂಟಿಕೊಪ್ಪ: ಸಮೀಪದ ಮಾದಾಪುರ ಬಳಿಯ ಸೂರ್ಲಬ್ಬಿ ಅಂಚೆ ಕಚೇರಿಯ ಸಿಬ್ಬಂದಿಯೊಬ್ಬರು ಅಮೂಲ್ಯ ದಾಖಲೆಗಳ ಬ್ಯಾಗ್ ಅನ್ನು ಸೂರ್ಲಬ್ಬಿ–ಅಮ್ಯಾಲ ಬಳಿಯ ತೋಟಕ್ಕೆ ಎಸೆದಿರುವುದು ಬೆಳಕಿಗೆ ಬಂದಿದೆ.
ಸಾರ್ವಜನಿಕರಿಗೆ ವಿತರಣೆ ಮಾಡಬೇಕಿದ್ದ ಆಧಾರ್ ಕಾರ್ಡು, ಬ್ಯಾಂಕ್ ಚೆಕ್‌ಗಳು, ಸ್ಕಾಲರ್‌ಶೀಪ್ ಪತ್ರಗಳು, ಡೆಬಿಟ್ ಕಾರ್ಡ್, ಎ.ಟಿ.ಎಂ ಕಾರ್ಡ್, ಶಾಲಾ ದಾಖಲಾತಿಗಳು, ಯೋಧರ ದಾಖಲೆಗಳ ಪತ್ರಗಳನ್ನು ನೀಡದೇ ಕಾಡಿನಲ್ಲಿ ಎಸೆದಿರುವುದು ಕಂಡುಬಂದಿದೆ.
ತೋಟದಲ್ಲಿ ದಾಖಲೆಗಳು ದೊರೆತ ಬಳಿಕ ಕೊಡಗು ಸೇವಾ ಕೇಂದ್ರದಿಂದ ಜಿಲ್ಲಾಧಿಕಾರಿ ಹಾಗೂ ಕೊಡಗು ಎಸ್ಪಿ ಅವರಿಗೆ ದೂರು ನೀಡಲಾಗಿತ್ತು. ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸೂರ್ಲಬ್ಬಿ ಅಂಚೆಯಲ್ಲಿ ಮೊದಲು ಕಾರ್ಯ ನಿರ್ವಹಿಸುತ್ತಿದ್ದ ಅಪ್ಪಡ ಮಹೇಶ್ ಅವರೇ ಈ ಕೃತ್ಯ ಎಸದಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಬಡ್ತಿ ಪಡೆದು ಚೆಯ್ಯಂಡಾಣೆ ಅಂಚೆ ಕಚೇರಿಗೆ ವರ್ಗಾವಣೆಗೊಂಡಿರುವ ಅವರನ್ನು ನಾಪೋಕ್ಲು ಪೊಲೀಸರು ಶನಿವಾರ ಬಂಧಿಸಿದ್ದಾರೆ.
ದಾಖಲೆಗಳನ್ನು 2017ರಿಂದಲೂ ವಿತರಣೆ ಆಗದಿರುವುದು ಗೊತ್ತಾಗಿದೆ. ನಿವೃತ್ತಿ ವೇತನ, ವಯೋವೃದ್ಧರ ವೇತನ ಸೇರಿದಂತೆ ಇನ್ನಿತರ ವೇತನಗಳಿಗೆ ಸಹಿ ಹಾಕಿಸಿಕೊಂಡು, ಬಡವರಿಗೆ ಮೋಸ ಮಾಡಿದ್ದಾರೆ. ತಪ್ಪಿತಸ್ಥ ಅಂಚೆ ಸಿಬ್ಬಂದಿ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಆತನನ್ನು ಕರ್ತವ್ಯದಿಂದಲೂ ಅಮಾನತುಗೊಳಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.