'ನಿಖಿಲ್ ಎಲ್ಲಿದೀಯಪ್ಪ...’ ಟ್ರೋಲ್​ ಆಯ್ತು ಗೌಡ್ರ ಕುಟುಂಬ ರಾಜಕಾರಣ!

ಶನಿವಾರ, ಮಾರ್ಚ್ 23, 2019
31 °C

'ನಿಖಿಲ್ ಎಲ್ಲಿದೀಯಪ್ಪ...’ ಟ್ರೋಲ್​ ಆಯ್ತು ಗೌಡ್ರ ಕುಟುಂಬ ರಾಜಕಾರಣ!

Published:
Updated:

ಬೆಂಗಳೂರು: ಲೋಕಸಭೆ ಚುನಾವಣೆಗೆ ಮಂಡ್ಯ ಕ್ಷೇತ್ರದಿಂದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಪುತ್ರ ನಿಖಿಲ್‌ ಅವರನ್ನು ಕಣಕ್ಕಿಳಿಸಲು ಜೆಡಿಎಸ್‌ ತಯಾರಿ ನಡೆಸಿದೆ. ಇದರ ಬೆನ್ನಲ್ಲೇ ಗೌಡರ ಕುಟುಂಬ ರಾಜಕಾರಣದ ಬಗ್ಗೆ ವ್ಯಾಪಕ ಚರ್ಚೆಗಳಾಗುತ್ತಿವೆ. ಜತೆಗೆ, ‘ನಿಖಿಲ್ ಎಲ್ಲಿದೀಯಪ್ಪ...’ ಎಂದು ಕುಮಾರಸ್ವಾಮಿ ಕೇಳುವ ಸಂವಾದದ ಆಡಿಯೊ ಮಿಕ್ಸ್‌ ಮಾಡಿದ ವಿಡಿಯೊಗಳು ಟ್ರೋಲ್ ಆಗಿವೆ. ಈ ಮೂಲಕ ಗೌಡ್ರ ಕುಟುಂಬ ರಾಜಕಾರಣವನ್ನು ಜನ ಅಣಕವಾಡಿದ್ದಾರೆ.

ಹತ್ತಾರು ಜನ ಹಲವು ವಿಭಿನ್ನ ಶೈಲಿಯಲ್ಲಿ ಆಡಿಯೊವನ್ನು ಮಿಕ್ಸ್‌ ಮಾಡಿ ವ್ಯಂಗ್ಯವಾಡಿದ್ದಾರೆ. ಅವುಗಳ ಕೆಲ ತುಣುಕುಗಳು ಇಲ್ಲಿವೆ.

 

 

 

 

ಮೂಲ ವಿಡಿಯೊದಲ್ಲಿ ಏನಿದೆ?
ಕಾರ್ಯಕ್ರಮವೊಂದರಲ್ಲಿ ಮೈಕ್‌ ಹಿಡಿದ ಕುಮಾರಸ್ವಾಮಿಗೆ ಅಲ್ಲಿದ್ದವರೊಬ್ಬರು ಸರ್‌ ನಿಖಿಲ್‌ ಅಂತ ಕೂಗಿ ಸರ್‌ ಎನ್ನುತ್ತಾರೆ. ಆಗ ಕುಮಾರಸ್ವಾಮಿ, ‘ನಿಖಿಲ್‌ ಎಲ್ಲಿದ್ದೀಯಪ್ಪಾ... ನಿಖಿಲ್‌, ಓ ನಿಖಿಲ್‌ ಎಲ್ಲಿದ್ದೀ’ ಎಂದು ಕೇಳುತ್ತಾರೆ. ಈ ಮಧ್ಯೆ ನಿಖಿಲ್‌ ಕೈ ತೋರಿಸುವ ವಿಡಿಯೊ ಕಾಣುತ್ತದೆ. ಆ ವೇಳೆ, ಕುಮಾರಸ್ವಾಮಿ ‘ಓ ಈಗಾಗಲೇ ನೀನು ಜನಗಳ ಮಧ್ಯೆ ಸೇರಿಬಿಟ್ಟಿದ್ದೀಯಾ. ಜನಗಳ ಆಶೀರ್ವಾದ ಪಡೆಯಲು ಜನಗಳ ಜತೆ ಸೇರಿದ್ದೀಯ ಹಾಗಿದ್ರೆ’ ಎಂದು ಕೇಳುತ್ತಾರೆ. ಅದಕ್ಕೆ ಪ್ರತಿಕ್ರಿಯಿಸುವ ನಿಖಿಲ್‌, ‘ನಿಮ್ಮನ್ನು ನಮ್ಮ ತಾತನ್ನ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತ್ಸೋ ಈ ಜನಗಳ ಮಧ್ಯೆ ಇದ್ದೀನಿ ಅಪ್ಪಾ’ ಎನ್ನುತ್ತಾರೆ.

ಅದಕ್ಕೆ ಪ್ರತಿಕ್ರಿಯಿಸುವ ಕುಮಾರಸ್ವಾಮಿ, ‘ತ್ಯಾಂಕ್ಯೂ, ತ್ಯಾಂಕ್ಯೂ... ಅದನ್ನ ಬೆಳೆಸಿಕೊಳ್ಳಬೇಕು. ನಿನ್ನ ಜೀವನದಲ್ಲಿ ಅದು ಯಾವಾಗಲು ಸದಾಕಾಲ, ಇದೇವೊಂದು ಪ್ರೀತಿ ವಿಶ್ವಾಸ, ಈ ನಾಡಿನ ಜನತೆ ಬಗ್ಗೆ ಗೌರವನ್ನು ನೀನು ಇಟ್ಟುಕೊಳ್ಳಬೇಕು’ ಎಂದು ಹೇಳುವುದು ವಿಡಿಯೊದಲ್ಲಿದೆ.

ಬರಹ ಇಷ್ಟವಾಯಿತೆ?

 • 45

  Happy
 • 49

  Amused
 • 1

  Sad
 • 2

  Frustrated
 • 8

  Angry

Comments:

0 comments

Write the first review for this !