ಸೋಮವಾರ, ಏಪ್ರಿಲ್ 19, 2021
25 °C

ದೋಣಿಮಲೈ: ಅದಿರು ಗಣಿಗಾರಿಕೆ ಪುನರಾರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಎಂಟು ತಿಂಗಳಿನಿಂದ ಬಳ್ಳಾರಿ ಜಿಲ್ಲೆಯ ದೋಣಿಮಲೈ ಕಬ್ಬಿಣ ಅದಿರು ಗಣಿ ಪ್ರದೇಶದಲ್ಲಿ ಸ್ಥಗಿತಗೊಂಡಿದ್ದ ಕಾರ್ಯಾಚರಣೆಯನ್ನು ಕರ್ನಾಟಕ ಹೈಕೋರ್ಟ್‌ ನಿರ್ಧಾರದ ನಂತರ, ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮ (ಎನ್‌ಎಂಡಿಸಿ) ಪುನರಾರಂಭಸಲಿದೆ.

ಗುತ್ತಿಗೆ ಪರವಾನಗಿನವೀಕರಿಸಬೇಕು ಮತ್ತು ದೋಣಿಮಲೈ ಗಣಿಯಲ್ಲಿ ಗಣಿಗಾರಿಕೆ ಕೈಗೆತ್ತಿಕೊಳ್ಳಲು ಅನುಮತಿ ನೀಡಬೇಕು ಎಂದು ಎನ್‌ಎಂಡಿಸಿ ರಾಜ್ಯ ಸರ್ಕಾರವನ್ನು ಕೋರಿತ್ತು.ಗಣಿಗಾರಿಕೆ ಪುನರಾರಂಭಿಸುವುದರಿಂದ ರಾಜ್ಯದಲ್ಲಿನ ಉಕ್ಕು ಕಾರ್ಖಾನೆಗಳಿಗೆ ತೀರಾ ಅಗತ್ಯವಾಗಿರುವ ಕಬ್ಬಿಣದ ಅದಿರು ಪೂರೈಸಬಹುದು. ಆ ಮೂಲಕ, ಎನ್‌ಎಂಡಿಸಿ ಮತ್ತು ರಾಜ್ಯ ಸರ್ಕಾರಕ್ಕೆ ಉಂಟಾಗುವ ನಷ್ಟವನ್ನು ಕಡಿಮೆಗೊಳಿಸಬಹುದು ಎಂದು ಹೇಳಿತ್ತು.

‘ದೀರ್ಘಕಾಲದಿಂದ ಕಾಯುತ್ತಿದ್ದ ಕ್ಷಣ ಬಂದಿದೆ. ಗಣಿಗಾರಿಕೆ ಪುನರಾರಂಭ ರಾಜ್ಯದ ಉಕ್ಕು ಉತ್ಪಾದಕರಿಗೆ, ಹೂಡಿಕೆ
ದಾರರಿಗೆ, ಗಣಿ ಉದ್ಯಮಿಗಳಿಗೆ, ಗ್ರಾಹಕರಿಗೆ ಮತ್ತು ನೌಕರರಿಗೆ ಸಂತಸ ತಂದಿದೆ’ ಎಂದು ಎನ್‌ಎಂಡಿಸಿಯ ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಎನ್. ಬೈಜೇಂದ್ರಕುಮಾರ್‌ ಹೇಳಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು